ಉಪ್ಪಿನಂಗಡಿ: ಎಸ್ಡಿಪಿಐ ನೂತನ ಕಛೇರಿ ಮತ್ತು ಸೇವಾಕೇಂದ್ರ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ. 13. ಎಸ್ಡಿಪಿಐ ಉಪ್ಪಿನಂಗಡಿ ಬ್ಲಾಕ್ ವತಿಯಿಂದ ಪಕ್ಷದ ನೂತನ ಕಛೇರಿ ಮತ್ತು ಮಾಹಿತಿ ಸೇವಾ ಕೇಂದ್ರವು ಉಪ್ಪಿನಂಗಡಿಯ ದಾವೂದ್ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟನೆಗೊಂಡಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಪಿಐ ಉಪ್ಪಿನಂಗಡಿ ಬ್ಲಾಕ್ ಸಮಿತಿ ಅಧ್ಯಕ್ಷರಾದ ಮುಸ್ತಫಾ ಲತೀಫಿ ವಹಿಸಿದ್ದರು. ಎಸ್ಡಿಪಿಐ ದ.ಕ ಜಿಲ್ಲಾ ಸಮಿತಿ ಅಧ್ಯಕ್ಷರಾದ ಅಬೂಬಕ್ಕರ್ ಕುಳಾಯಿ ರಿಬ್ಬನ್ ಕತ್ತರಿಸುವ ಮೂಲಕ ಕಛೇರಿಯನ್ನು ಉದ್ಘಾಟಿಸಿದರು. ಅದೇ ರೀತಿ ಎಸ್ಡಿಪಿಐ ಪಕ್ಷದ ಮುಖಂಡರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆಗೈದಿರುವ ಹಾಗೂ ಕೊರೋನಾ ವಾರಿಯರ್ಸ್ ಗಳನ್ನು ಸನ್ಮಾನಿಸಲಾಯಿತು.
ಅದೇ ರೀತಿ ಸ್ಥಳೀಯ ಮುಖಂಡರಾದ ಶಾಹುಲ್ ಹಮೀದ್ ಸೇರಿದಂತೆ ಹಲವರು ಎಸ್ಡಿಪಿಐ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡು ಪಕ್ಷಕ್ಕೆ ಸೇರ್ಪಡೆಗೊಂಡರು.

Also Read  ಸಾರ್ವಜನಿಕ ಆಕ್ಷೇಪಣೆಗೆ ಅವಕಾಶ

ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ದ.ಕ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು, ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಸಾಗರ್, ಕಾರ್ಯದರ್ಶಿ ಶಾಕಿರ್ ಅಳಕೆಮಜಲು, ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್, ಪಾಪ್ಯುಲರ್ ಫ್ರಂಟ್ ಉಪ್ಪಿನಂಗಡಿ ಜಿಲ್ಲಾ ಸಮಿತಿ ಉಪ್ಪಿನಂಗಡಿಯ ಅಧ್ಯಕ್ಷರಾದ ಹಮೀದ್ ಮೆಜೆಸ್ಟಿಕ್, ಎಸ್ಡಿಪಿಐ ಕಡಬ ಬ್ಲಾಕ್ ಅಧ್ಯಕ್ಷರಾದ ಬಶೀರ್ ಹಲ್ಯಾರ, ಬೆಳ್ತಂಗಡಿ ತಾಲೂಕು ಸಮಿತಿ ಸದಸ್ಯರಾದ ಇನಾಸ್ ರೋಡ್ರಿಗಸ್, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ರಶೀದ್ ಮಠ, ಮೈಸಿದಿ ಇಬ್ರಾಹಿಂ ಸೇರಿದಂತೆ ಜಿಲ್ಲಾ ಮತ್ತು ಸ್ಥಳೀಯ ಮುಖಂಡರು,
ಪಕ್ಷದ ಹಿತೈಷಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಝಕರಿಯಾ ಸ್ಟಾರ್ ನಿರೂಪಿಸಿ, ಇಕ್ಬಾಲ್ ಕೆಂಪಿ ಸ್ವಾಗತಿಸಿದರು. ರಶೀದ್ ಮಠ ಧನ್ಯವಾದಗೈದರು.

Also Read  ಸಪೋಟ ಫಸಲು ಹರಾಜು ಪ್ರಕಟಣೆ

error: Content is protected !!
Scroll to Top