ಕಾಣಿಯೂರು: ಅಡಿಕೆ ಅಂಗಡಿಗೆ ನುಗ್ಗಿದ ಜೀಪು ➤ ತಪ್ಪಿದ ಅಪಾಯ

(ನ್ಯೂಸ್ ಕಡಬ) newskadaba.com ಕಡಬ, ನ. 10. ಅಡಿಕೆ ಅಂಗಡಿಯೊಂದಕ್ಕೆ ಜೀಪು ನುಗ್ಗಿದ ಘಟನೆ ತಾಲೂಕಿನ ಕಾಣಿಯೂರು ಎಂಬಲ್ಲಿ ಇಂದು ನಡೆದಿದೆ.

ಕಾಣಿಯೂರಿನ ಅಡಿಕೆ ಅಂಗಡಿಯೊಂದಕ್ಕೆ ಜೀಪಿನಲ್ಲಿ ಅಡಿಕೆ ತರಲಾಗಿತ್ತು. ಬಳಿಕ ಜೀಪಿನಿಂದ ಅಡಿಕೆಯನ್ನು ಕೆಳಗಿಳಿಸಿ ಜೀಪನ್ನು ಹಿಂದಕ್ಕೆ ಚಲಾಯಿಸಿದಾಗ ನಿಯಂತ್ರಣ ತಪ್ಪಿ ಅಂಗಡಿಯ ಶಟರ್ ಗೆ ಗುದ್ದಿದೆ ಎನ್ನಲಾಗಿದೆ.

error: Content is protected !!
Scroll to Top