ಮರ್ಮಾಂಗವನ್ನೇ ಕತ್ತರಿಸಿ ಶಿಕ್ಷಕನ ಭೀಕರ ಹತ್ಯೆ..!

(ನ್ಯೂಸ್ ಕಡಬ) newskadaba.com ಬೀದರ್, ನ. 10. ಶಿಕ್ಷಕರೋರ್ವರ ಮರ್ಮಾಂಗವನ್ನೇ ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೀದರ್ ನ ಔರಾದ್ ಪಟ್ಟಣದಲ್ಲಿ ನಡೆದಿದೆ.

ಹತ್ಯೆಯಾದವರನ್ನು ಬೀದರ್ ಜಿಲ್ಲೆಯ ಔರಾದ್ ನ ಲಿಡ್ಕರ್ ಕಾಲನಿ ನಿವಾಸಿ ವಿಜಯ್ ಕುಮಾರ್ ಟೀಳೆಕರ್(46) ಎಂದು ಗುರುತಿಸಲಾಗಿದೆ. ಇವರು ಔರಾದ್ ನ ಕರಂಜಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹತ್ಯೆಗೆ ನಿಖರ ಕಾರಣ ತನಿಖೆಯಿಂದಲೇ ತಿಳಿದು ಬರಬೇಕಿದೆ.

Also Read  ಕೌಟುಂಬಿಕ ಕಲಹ ➤ಚಾಕುವಿನಿಂದ ಇರಿದು ಮೈದುನನ ಕೊಲೆ

error: Content is protected !!
Scroll to Top