ಪುತ್ತೂರು: ಕೊಟ್ಟ ಸಾಲ ಕೇಳಿದ ಕ್ಲೀನರ್ ➤ ಅರ್ಧದಲ್ಲೇ ಇಳಿಸಿಹೋದ ಚಾಲಕ..!

(ನ್ಯೂಸ್ ಕಡಬ) newskadaba.com ಪುತ್ತೂರು, ನ. 10. ಸಾಲವಾಗಿ ಕೊಟ್ಟಿದ್ದ ಹಣವನ್ನು ವಾಪಾಸು ಕೇಳಿದನೆಂದು ಲಾರಿ ಕ್ಲೀನರ್ ನನ್ನು ಚಾಲಕ ಅರ್ಧದಲ್ಲೇ ಬಿಟ್ಟು ಹೋದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಲಾರಿ ಕ್ಲೀನರ್ ಗೌರಿಬಿದನೂರಿನ ಸತೀಶ್ ಅರ್ಧ ದಾರಿಯಲ್ಲಿ ಬಾಕಿಯಾದ ವ್ಯಕ್ತಿ. ಬೆಂಗಳೂರಿನಿಂದ ಕ್ಯಾಪ್ಸಿಕಂ ಮೆಣಸನ್ನು ತುಂಬಿಕೊಂಡು ಬಂದಿದ್ದ ವಿಟ್ಲ ತಲುಪುತ್ತಿದ್ದಂತೆಯೇ ಸಾಲವಾಗಿ ನೀಡಿದ್ದ 8 ಸಾವಿರ ಹಣವನ್ನು ವಾಪಾಸು ಕೊಡುವಂತೆ ಕ್ಲೀನರ್ ಚಾಲಕನಿಗೆ ಕೇಳಿದ್ದ. ಇದರಿಂದ ಸಿಟ್ಟಿಗೆದ್ದ ಚಾಲಕನ ಆತನನ್ನು ಗದರಿಸಿ ಆತನಲ್ಲಿದ್ದ ಮೊಬೈಲ್ ಹಾಗೂ ಪರ್ಸ್ ನ್ನು ಕಿತ್ತು ಅರ್ಧದಲ್ಲೇ ಬಿಟ್ಟು ಹೋಗಿದ್ದಾನೆ ಎನ್ನಲಾಗಿದೆ. ನಂತರ ಕ್ಲೀನರ್ ವಿಟ್ಲದಿಂದ ನಡೆದುಕೊಂಡು ಸವಣೂರು ತಲುಪಿದ್ದು, ಈ ವೇಳೆ ಬೈಕ್ ನಲ್ಲಿ ತೆರಳುತ್ತಿದ್ದ ಪುತ್ತೂರಿನಲ್ಲಿ ಉದ್ಯೋಗಿಯಾಗಿರುವ ಬೆಳ್ತಂಗಡಿ ಯುವಕನ ಜೊತೆ ಡ್ರಾಪ್ ಕೇಳಿದ್ದು, ನಡೆದ ವಿಚಾರವನ್ನೆಲ್ಲ ವಿವರಿಸಿದ್ದಾನೆ. ಕೊನೆಗೆ ಯುವಕ ಆತನಿಗೆ 800ರೂ. ನೀಡಿ ಕಳುಹಿಸಿದ್ದಾನೆ ಎನ್ನಲಾಗಿದೆ.

Also Read  ಅಂತರ್ರಾಷ್ಟ್ರೀಯ ಜಿನಸಮ್ಮಿಲನ 2020 ರ ಪ್ರಯುಕ್ತ ಕವನವಾಚನ ಸ್ಪರ್ಧೆ ➤ ಕಡಬದ ಯುವ ಸಾಹಿತಿ ಸಮ್ಯಕ್ತ್ ಜೈನ್ ಪ್ರಥಮ

error: Content is protected !!
Scroll to Top