ಉಳ್ಳಾಲ ಖಾಝಿ ಕೂರಾ ತಂಙಳ್ ವಿರುದ್ಧ ಅಪಪ್ರಚಾರ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 10. ಉಳ್ಳಾಲ ಖಾಝಿ ಸೈಯದ್‌ ಫಝಲ್‌ ಕೋಯಮ್ಮ ಕೂರಾ ತಂಙಳ್‌ ವಿರುದ್ಧ ಸಂಘಪರಿವಾರ ಹಾಗೂ ಬಿಜೆಪಿ ಸುಳ್ಳು ಸುದ್ದಿ ಹರಡಿದ ಘಟನೆ ವರದಿಯಾಗಿದೆ.

ಖಾಝಿ ಸೈಯದ್ ಫಝಲ್‌ ಕೋಯಮ್ಮ ತಂಙಳ್‌ ರವರು ಆಹಾರಕ್ಕೆ ಮಂತ್ರಿಸಿ ಊದುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರ

ಆಗಿದ್ದು, ಇದನ್ನು ಬಿಜೆಪಿಯ ರಾಷ್ಟ್ರೀಯ ವಕ್ತಾರರು ಆಹಾರಕ್ಕೆ ಮೌಲ್ವಿ ಉಗುಳುತ್ತಿದ್ದಾರೆಂದು ಸುಳ್ಳು ಸುದ್ದಿಯನ್ನು ಹರಡಿದ್ದಾರೆ. ಕೂರಾ ತಂಙಳ್‌ ರವರ ತಂದೆ ಸೈಯದ್‌ ಅಬ್ದುರ್ರಹ್ಮಾನ್‌ ಅಲ್‌ ಬುಖಾರಿ ತಂಙಳ್‌ ರವರ ಉರೂಸ್‌ ಸಂದರ್ಭದಲ್ಲಿ ಸಾಮೂಹಿಕ ಅನ್ನ ಸಂತರ್ಪಣೆ ಕಾರ್ಯಕ್ರಮವಿತ್ತು. ಆಹಾರ ವಿತರಣೆಗೆ ಮುಂಚೆ ಕುರ್‌ ಆನ್‌ ಸೂಕ್ತಗಳನ್ನು ಓದಿ ಊದಲಾಗಿದೆ. ಇದನ್ನು ಉಗುಳಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರೀತಿ ಗಾಂಧಿ, ನವೀನ್‌ ಕುಮಾರ್‌ ಜಿಂದಾಲ್‌, ಗೌರವ್‌ ಗೋಯೆಲ್‌ ಮುಂತಾದವರು ತಂಙಲ್ ಬಗ್ಗೆ ಟ್ವಿಟರ್‌ ನಲ್ಲಿ ಅಪಪ್ರಚಾರವಾಗಿ ಬರೆದಿದ್ದಾರೆ.

Also Read  ಉಡುಪಿ: ಚಾಲಕಿಯ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು ➤ 7 ಬೈಕ್ ಗಳು ಜಖಂ

error: Content is protected !!
Scroll to Top