ದ್ವಿಚಕ್ರ ವಾಹನ ಸವಾರರಿಗೆ ಗುಡ್ ನ್ಯೂಸ್ ➤ ಸುರಕ್ಷತಾ ದೃಷ್ಟಿಯಿಂದ ದ್ವಿಚಕ್ರ ವಾಹನಗಳಿಗೆ ಏರ್ ಬ್ಯಾಗ್ ಅಳವಡಿಕೆ..!

(ನ್ಯೂಸ್ ಕಡಬ) newskadaba.com ನವದೆಹಲಿ, ನ. 10. ಕಾರುಗಳಲ್ಲಿ ಸುರಕ್ಷತೆಗಾಗಿ ಏರ್ ಬ್ಯಾಗ್ ಅಳವಡಿಸಿರುವಂತೆಯೇ ಇನ್ನು ಮುಂದೆ ದ್ವಿಚಕ್ರ ವಾಹನಗಳಿಗೂ ಏರ್ ಬ್ಯಾಗ್ ವ್ಯವಸ್ಥೆಯನ್ನು ಅಳವಡಿಸಲಾಗುವುದು ಎಂದು ಹೇಳಲಾಗಿದೆ.

ಇದಕ್ಕೆ ಸಂಬಂಧಪಟ್ಟಂತೆ ವಾಹನ ಸುರಕ್ಷತಾ ಸಾಧನಗಳ ತಯಾರಿಕಾ ಕಂಪನಿ ಆಟೋಲಿವ್ ನೊಂದಿಗೆ ಪಿಯಾಜ್ಜಿಯೋ ಒಪ್ಪಂದ ಮಾಡಿಕೊಂಡಿದ್ದು, ಸ್ಕೂಟರ್ ಹಾಗೂ ಮೋಟಾರ್ ಸೈಕಲ್ ಗಳಲ್ಲಿ ಸವಾರರ ಸುರಕ್ಷತೆಯ ದೃಷ್ಟಿಯಿಂದ ಏರ್ ಬ್ಯಾಗ್ ಅಭಿವೃದ್ಧಿ ಪಡಿಸಲಾಗುವುದು. ಇದು ಅಪಘಾತದ ತುರ್ತು ಸಂದರ್ಭದಲ್ಲಿ ಮಿಲಿ ಸೆಕೆಂಡ್ ಒಳಗೆ ಓಪನ್ ಆಗಿ ಸವಾರರಿಗೆ ರಕ್ಷಣೆ ನೀಡಲಿದೆ. ಹ್ಯಾಂಡಲ್ ಮೇಲ್ಭಾಗದಲ್ಲಿ ಏರ್ ಬ್ಯಾಗ್ ಅಳವಡಿಸುವ ಕುರಿತು ಈಗಾಗಲೇ ಪೂರ್ಣ ಪ್ರಮಾಣದ ಪರೀಕ್ಷೆ ನಡೆಸಲಾಗಿದ್ದು, ಇನ್ನು ಮುಂದಿನ ದಿನಗಳಲ್ಲಿ ಸವಾರರ ಸುರಕ್ಷತೆಗೆ ಏರ್ ಬ್ಯಾಗ್ ಅಳವಡಿಸಲಾಗುವುದು ಎಂದು ತಿಳಿದುಬಂದಿದೆ.

Also Read  ನಾಳೆಯಿಂದ ಶಿರಾಡಿ ಘಾಟ್ ನಲ್ಲಿ ಲಾರಿ ಸೇರಿದಂತೆ ಘನ ವಾಹನಗಳ ಸಂಚಾರ ಆರಂಭ

error: Content is protected !!
Scroll to Top