ಕಾರಿಂಜ ದೇವಸ್ಥಾನ ಅಪವಿತ್ರಗೊಳಿಸಿದ ಹಿನ್ನೆಲೆ ➤ ಪೊಲೀಸರಿಂದ ಎಚ್ಚರಿಕೆ ಬ್ಯಾನರ್ ಅಳವಡಿಕೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ. 10. ಇತಿಹಾಸ ಪ್ರಸಿದ್ಧ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಪರಿಸರದಲ್ಲಿ ದೇವಾಲಯದ ಪವಿತ್ರತೆಗೆ ಧಕ್ಕೆ ತರುವಂತಹ ಕೃತ್ಯವನ್ನು ಮಾಡಿದರೆ ಕಠಿಣ ಕಾನೂನು ಕ್ರಮ ಜರುಗಿಸಲು ಪೊಲೀಸ್ ಇಲಾಖೆ ಮುಂದಾಗಿದ್ದು, ಈ ಬಗ್ಗೆ ಎಚ್ಚರಿಕೆಯ ಬ್ಯಾನರ್ ಒಂದನ್ನು ಪೊಲೀಸರು ದೇವಾಲಯದ ಆಸುಪಾಸಿನಲ್ಲಿ ಅಳವಡಿಸಿದ್ದಾರೆ.

ದೇವಸ್ಥಾನಗಳನ್ನು ಅಪವಿತ್ರಗೊಳಿಸುವಂತಹ ನೀಚ ಚಟುವಟಿಕೆಗಳು ಕಂಡು ಬಂದಲ್ಲಿ ತುರ್ತು ಸ್ಪಂದನಾ ಸೇವೆ ನಂಬರ್ (ERSS): 112, ಪುಂಜಾಲಕಟ್ಟೆ ಪೊಲೀಸ್ ಠಾಣೆ 08256-279375, 8277986411 ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಎಂದು ಪ್ರಕಟಣೆಯ ಬ್ಯಾನರ್ ನ್ನು ಪೋಲೀಸರು ಕಾರಿಂಜ ದೇವಾಲಯದ ಪರಿಸರದಲ್ಲಿ ಅಳವಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಉಂಟಾದಂತಹ ದುಷ್ಕೃತ್ಯಗಳು ಮತ್ತೆ ಮರುಕಳಿಸಿದ ಹಾಗೆ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಈ ಕ್ರಮದ ಮೂಲಕ ಎಚ್ಚರಿಕೆ ನೀಡಿದೆ.

Also Read  ಕೊಣಾಜೆ: ಅಪ್ರಾಪ್ತ ವಯಸ್ಸಿನ ಬಾಲಕಿಯ ಅತ್ಯಾಚಾರ ► ಆರೋಪಿ ತಂದೆ ಮತ್ತು ಬಾಡಿಗೆ ಮನೆಯ ಮಾಲಕನ ಬಂಧನ


error: Content is protected !!
Scroll to Top