ಬೀಡಿ, ಗಣಿ, ಸಿನೆಮಾ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನಕ್ಕೆ ಅರ್ಜಿಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 09. ಕೇಂದ್ರ ಸರಕಾರದ ಕಾರ್ಮಿಕ ಕಲ್ಯಾಣ ಇಲಾಖೆ ವತಿಯಿಂದ ಬೀಡಿ, ಗಣಿ ಹಾಗೂ ಸಿನೆಮಾ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.


ವಿದ್ಯಾರ್ಥಿ ವೇತನವು ಒಂದರಿಂದ ಡಿಗ್ರಿ ಮಟ್ಟದವರೆಗೆ 250 ರೂ.ಗಳಿಂದ ಮೂರು ಸಾವಿರದವರೆಗೆ, ಐಟಿಐ ಕೋರ್ಸ್ ಗಳಿಗೆ 10 ಸಾವಿರ ಹಾಗೂ ವೃತ್ತಿಪರ ಶಿಕ್ಷಣಕ್ಕೆ 15 ಸಾವಿರ ರೂ.ಗಳನ್ನು ನೀಡಲಾಗುವುದು. ಈ ಮೊತ್ತವು ಬೀಡಿ ಕಾರ್ಮಿಕ ಮಕ್ಕಳ ಬ್ಯಾಂಕ್‍ ಖಾತೆಗೆ ನೇರವಾಗಿ ಜಮೆಯಾಗಲಿದೆ. ಅರ್ಜಿ ಸಲ್ಲಿಕೆಗೆ – ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ (1 ರಿಂದ 10ನೇ ತರಗತಿ) ಇದೇ ನವೆಂಬರ್15 ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ನ.30 ಕೊನೆಯ ದಿನವಾಗಿದೆ.

Also Read  ಯುವಜನರ ಮಾರ್ಗದರ್ಶನಕ್ಕೆ ಯುವ ನೀತಿ-2021 ಅಗತ್ಯ ➤ ಜಿಲ್ಲಾಧಿಕಾರಿ ಡಾ. ರಾಜೇಂದ್ರ


ಶಾಲಾ ಮುಖ್ಯಸ್ಥರು ವಿದ್ಯಾರ್ಥಿಗಳ ಅರ್ಜಿಯನ್ನು ಪರಿಶೀಲಿಸಿ, ಶಿಫಾರಸು ಮಾಡಲು ಡಿಸೆಂಬರ್ 15 ಕೊನೆಯ ದಿನ. ರಾಜ್ಯ ನೋಡಲ್‍ ಅಧಿಕಾರಿಯಿಂದ ಪರಿಶೀಲನೆ ಮಾಡಲು ಡಿಸೆಂಬರ್ 31 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಗುವುದಿಲ್ಲ. ಎನ್‍ಎಸ್‍ಪಿ ಯಲ್ಲಿಅರ್ಜಿ ಸಲ್ಲಿಸಲು ಯಾವುದೇ ವಿವರಣೆ ಬೇಕಾದರೆ ಹೆಲ್ಪ್ ಡೆಸ್ಕ್ ಗೆ map.gov.in ಸಂಪರ್ಕಿಸಬಹುದು. ಅರ್ಜಿ ಸಲ್ಲಿಕೆಗೆ ಇ-ಮೇಲ್ ವಿಳಾಸ welwoblr-ka@nic.in ವೆಬ್‍ಸೈಟ್ http:/scholarship.gov.in ಸಂಪರ್ಕಿಸಬಹುದು ಎಂದು ಕಾರ್ಮಿಕ ಕಲ್ಯಾಣ ಇಲಾಖೆ ಆಯುಕ್ತ ಕೆ.ಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top