ಅಲ್ಪಸಂಖ್ಯಾತರ ವಿಶೇಷ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 09. ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರ (ಬೌದ್ಧ, ಕ್ರಿಶ್ಚಿಯನ್, ಜೈನ್, ಮುಸ್ಲಿಂ, ಪಾರ್ಸಿ ಮತ್ತು ಸಿಖ್) ಸಮುದಾಯದ ಬಿ.ಎಡ್ ಮತ್ತು ಡಿ.ಎಡ್‍ ಕೋರ್ಸ್ ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 25,000 ರೂ.ಗಳ ವಿಶೇಷ ಪ್ರೋತ್ಸಾಹಧನಕ್ಕೆಅರ್ಜಿ ಸಲ್ಲಿಸುವ ಅವಧಿಯನ್ನುಇದೇ ನವೆಂಬರ್ 21ರ ವರೆಗೆ ವಿಸ್ತರಿಸಲಾಗಿದೆ.


ಅರ್ಜಿಯನ್ನುಇಲಾಖಾ ವೆಬ್‍ಸೈಟ್ ಲಿಂಕ್ https://dom.karnataka.gov.in/dakshina_kannada/public ಮೂಲಕ ಗೂಗಲ್ ಫಾರ್ಮದ ನಲ್ಲಿ ಭರ್ತಿ ಮಾಡಿ ಅರ್ಜಿಯ ಜತೆ ದೃಢೀಕೃತ ದಾಖಲಾತಿಗಳನ್ನು ಮಂಗಳೂರಿನ ಪಾಂಡೇಶ್ವರದ ಓಲ್ಡ್ ಕೆಂಟ್‍ ರಸ್ತೆಯಲ್ಲಿರುವ ಮೌಲಾನಾ ಆಝಾದ್ ಭವನದಲ್ಲಿರುವ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಯವರ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾಅಲ್ಪ ಸಂಖ್ಯಾತರ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಬಡ ಹೆಣ್ಣು ಮಕ್ಕಳ ವಿವಾಹಕ್ಕೆ ಸಹಾಯ ಮಾಡುವುದು ದೇವರು ಮೆಚ್ಚುವ ಕೆಲಸ ➤ ಸಯ್ಯದ್ ಜೈನುಲ್ ಆಬಿದಿನ್

error: Content is protected !!
Scroll to Top