ಕರ್ಕಶ ಹಾರ್ನ್ ವಿರುದ್ದ ತಪಾಸಣಾ ಕಾರ್ಯ ➤ 83,500 ರೂ. ದಂಡ ವಸೂಲಿ..!

(ನ್ಯೂಸ್ ಕಡಬ) newskadaba.com ಮಂಗಳೂರು, ನ. 09. ಕರ್ಕಶ ಹಾರ್ನ್ ಗಳಿಗೆ ಸಂಬಂಧಿಸಿದ ಉಪಕರಣಗಳನ್ನು ನಗರದ ವಿವಿಧ ಬಸ್ ಗಳಿಂದ ಟ್ರಾಫಿಕ್ ಪೊಲೀಸರು ತೆರವುಗೊಳಿಸಿದ ಬಗ್ಗೆ ವರದಿಯಾಗಿದೆ.

ಟ್ರಾಫಿಕ್ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ಕರ್ಕಶ ಹಾರ್ನ್ ಬಳಕೆ ಮಾಡುತ್ತಿದ್ದ ವಾಹನಗಳ ಮೇಲೆ ಕೇಸು ದಾಖಲಿಸಿ, ಒಂದೇ ದಿನದಲ್ಲಿ 167 ಪ್ರಕರಣ ದಾಖಲಾಗಿ, 83,500 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ನಗರದ ಖಾಸಗಿ ಬಸ್ಸುಗಳಲ್ಲಿ ಕರ್ಕಶ ಹಾರ್ನ್ ‌ಹೆಚ್ಚಾಗಿ ಬಳಸಲಾಗುತ್ತಿರುವ ಹಿನ್ನೆಲೆ ಟ್ರಾಫಿಕ್ ಎಸಿಪಿ ನಟರಾಜ್ ಮತ್ತು ತಂಡದಿಂದ ಕಾರ್ಯಾಚರಣೆ ನಡೆಸಲಾಗಿದೆ.

Also Read  'ಮಾಂಸ ಸೇವಿಸಿದ್ದು ನಿಜ, ಗರ್ಭಗುಡಿಗೆ ಹೋಗಿಲ್ಲ'       ➤  ಸಿ.ಟಿ. ರವಿ ಸ್ಪಷ್ಟನೆ..!

error: Content is protected !!
Scroll to Top