ಅಡಕೆ ಸೇವನೆ ನಿಷೇಧಕ್ಕೆ ಬಿಜೆಪಿ ಸಂಸದ ಆಗ್ರಹ..!

(ನ್ಯೂಸ್ ಕಡಬ) newskadaba.com ರಾಂಚಿ, ನ. 09. ಅಡಿಕೆ ಸೇವನೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂದು ಹಲವು ಸಂಶೋಧನೆಗಳು ಸಾಬೀತುಪಡಿಸಿದ್ದಾರೂ ಜನರು ಮಾರಣಾಂತಿಕ ಕಾಯಿಲೆಗಳಿಗೆ ಒಳಗಾಗುವುದನ್ನು ತಡೆಯಲು ಅಡಕೆ ಸೇವನೆ ನಿಷೇಧಿಸಬೇಕು ಎಂದು ಜಾರ್ಖಂಡ್ ಬಿಜೆಪಿ ಸಂಸದ ನಿಶಾಂಕ್ ದುಬೆ ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ.

ಅಡಕೆ ನಿಷೇಧದ ಕುರಿತು ಪತ್ರ ಬರೆದ ನಿಶಾಂಕ್, ಜಾರ್ಖಂಡ್ ನಲ್ಲಿ ಅಡಕೆ ಸೇವಿಸಿದ ಜನ ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳಿಗೆ ತುತ್ತಾಗುವುದನ್ನು ವೈಯಕ್ತಿಕವಾಗಿ ಗಮನಿಸಿದ್ದೇವೆ, ಪಾನ್ ಗಳಲ್ಲಿ ಪ್ರಮುಖವಾಗಿ ಅಡಕೆಯನ್ನು ಬಳಸಲಾಗುತ್ತದೆ. ಅಡಿಕೆಯಿಂದ ಅಪಾಯವಿರುವುದರಿಂದ ಅದನ್ನು ನಿಷೇಧಿಸಬೇಕು ಎಂದಹ ಅವರು ಪತ್ರದಲ್ಲಿ ತಿಳಿಸಿದ್ದಾರೆ.

Also Read  ಜಿಲ್ಲಾಸ್ಪತ್ರೆಯಲ್ಲಿ ಬೆಂಕಿ ಅವಘಡ- ಹತ್ತು ಹಸುಗೂಸುಗಳು ಮೃತ್ಯು

error: Content is protected !!
Scroll to Top