ಕರಾವಳಿಯಲ್ಲಿ ಮರಳುಗಾರಿಕೆಗೆ ವಿಶೇಷ ರಿಯಾಯಿತಿ ➤ ಗ್ರಾ.ಪಂ. ವ್ಯಾಪ್ತಿಯ ಮರಳುಗಾರಿಕೆಗೆ ಆಯಾ ಗ್ರಾ.ಪಂ. ಗಳಿಗೆ ಅಧಿಕಾರ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 09. ಕಡಿಮೆ ದರದಲ್ಲಿ ಮರಳು ದೊರೆಯಲು ಹಾಗೂ ಮರಳುಗಾರಿಕೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ರಾಜ್ಯ ಸರ್ಕಾರವು ಹೊಸ ಮರಳು ನೀತಿ ಜಾರಿಗೊಳಿಸಲು ನಿರ್ಧರಿಸಿದೆ. ಕರಾವಳಿ ಪ್ರದೇಶದ ಸಾಂಪ್ರದಾಯಿಕ ಮರಳುಗಾರಿಕೆಗೆ ಸೋಮವಾರದಂದು ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದಲ್ಲಿ ಅನುಮತಿ ನೀಡಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಮರಳು ಮಾರಾಟಕ್ಕೆ ಒಂದು ಟನ್ ಗೆ 300 ರೂ. ಹಾಗೂ ನದಿ ಪಾತ್ರಗಳಲ್ಲಿ ಮರಳು ತೆಗೆದು ಮಾರಲು ಪ್ರತೀ ಟನ್ ಗೆ 700 ರೂ. ನಿಗದಿಗೊಳಿಸಲಾಗಿದೆ.


ಗ್ರಾ.ಪಂ. ವ್ಯಾಪ್ತಿಯ ಮರಳು, ಗಣಿಗಾರಿಕೆಗೆ ಆಯಾ ಗ್ರಾ.ಪಂ.ಗಳಿಗೆ ಅಧಿಕಾರ, ಹಸಿರು ನ್ಯಾಯಾಧೀಕರಣದ ನಿಯಮಾವಳಿಗಳನ್ನು ಅಳವಡಿಸಿಕೊಂಡು ಮರಳು ನೀತಿ ಜಾರಿ, ಮರಳು ತೆಗೆಯಲು ಸಂಬಂಧಿತ ಪ್ರಾಧಿಕಾರಗಳಿಂದ ಒಪ್ಪಿಗೆ ಪಡೆಯುವುದು ಕಡ್ಡಾಯ ಎಂಬ ನಿಯಮಗಳನ್ನು ಪಾಲಿಸಬೇಕಿದೆ. ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯಲ್ಲಿ ನಡೆಯುವ ನದಿ ಬದಿಯ ಸಾಂಪ್ರದಾಯಿಕ ಮಾನವಾಧಾರಿತ ಮುಳುಗು ಮರಳು ತೆಗೆಯುವ ಪದ್ಧತಿಗೆ ರಿಯಾಯಿತಿ ನೀಡಲಾಗಿದೆ. ಆದರೆ ಯಾವುದೇ ಯಂತ್ರೋಪಕರಣ ಬಳಸದೆ ಸಾಂಪ್ರದಾಯಿಕ ರೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ . ಗ್ರಾ.ಪಂ. ಅನುಮತಿ ಪಡೆದು ಮರಳು ಮಾರಬಹುದಾಗಿದೆ.

Also Read  ಜ.24 ರಿಂದ 26 ರವರೆಗೆ ಫಲಪುಷ್ಪ ಪ್ರದರ್ಶನ-2020

error: Content is protected !!
Scroll to Top