ಮಂಗಳೂರು: ಯುವತಿಗೆ ಅಶ್ಲೀಲ ಸಂದೇಶ ರವಾನೆ ➤ ಯುವಕನ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 09. ಮದುವೆ ನಿಗದಿಯಾಗಿದ್ದ ಯುವತಿಗೆ ಆಕೆಯನ್ನು ಮದುವೆಯಾಗಲಿರುವ ಯುವಕ ಅಶ್ಲೀಲ ಹಾಗೂ ವಿಚಿತ್ರ ಸಂದೇಶ ಕಳುಹಿಸುತ್ತಿದ್ದಾನೆ ಎಂದು ಯುವತಿಯು ನೀಡಿದ ದೂರಿನಂತೆ ಆರೋಪಿಯನ್ನು ಬಂಧಿಸಿದ ಘಟನೆ ನಡೆದಿದೆ.

ಬಂಧಿತ ಆರೋಪಿಯನ್ನು ಕುದ್ರೋಳಿ ಅಳಕೆ ನಿವಾಸಿ ಶ್ರೀನಿವಾಸ ಭಟ್ (35) ಎಂದು ಗುರುತಿಸಲಾಗಿದೆ. ಆರೋಪಿಗೆ ನಗರದ ಯುವತಿಯೋರ್ವಳ ಜೊತೆ ಮದುವೆ ಮಾತುಕತೆ ನಡೆದು, ಎರಡೂ ಕುಟುಂಬಗಳು ಒಪ್ಪಿಗೆ ಸೂಚಿಸಿದ್ದವು. ಇದರ ನಡುವೆ ಶ್ರೀನಿವಾಸ್ ಮದುವೆಯಾಗಲಿದ್ದ ಯುವತಿಯ ಮೊಬೈಲ್ ನಂಬರ್ ಪಡೆದು ಚಾಟಿಂಗ್ ಆರಂಭಿಸಿದ್ದ, ನಂತರ ಆಕೆಯ ಜೊತೆ ಸಲುಗೆಯಿಂದ ಮಾತನಾಡಿದ್ದಲ್ಲದೇ ಅಶ್ಲೀಲ ಸಂದೇಶಗಳನ್ನು ಹಾಕುತ್ತಿದ್ದ. ಇದು ಯುವತಿಗೆ ತೀರಾ ಇರಿಸು ಮುರಿಸು ಉಂಟಾಗಿ, ವಿಚಾರವನ್ನು ಯುವತಿಯು ಮನೆಯವರ ಗಮನಕ್ಕೆ ತಂದಿದ್ದು, ಕೂಡಲೇ ಕುಟುಂಬಸ್ಥರು ನಿಶ್ಚಿತಾರ್ಥ ಮುಂದೂಡಿದ್ದರು ಎನ್ನಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Also Read  ಬಂಟ್ವಾಳ: ಮರದಿಂದ ಬಿದ್ದು ವ್ಯಕ್ತಿ ಮೃತ್ಯು

error: Content is protected !!
Scroll to Top