ಉಡುಪಿ: ಮನೆಗೆ ನುಗ್ಗಿದ ಕಳ್ಳರು ➤ 18.35 ಲಕ್ಷ ರೂ ಮೌಲ್ಯದ ನಗ-ನಗದು ಕಳವು

(ನ್ಯೂಸ್ ಕಡಬ) newskadaba.com ಉಡುಪಿ, ನ. 08. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ನಗದು ಸಹಿತ ಅಪಾರ ಮೌಲ್ಯದ ಸೊತ್ತುಗಳನ್ನು ಕದ್ದೊಯ್ದ ಘಟನೆ ಅಂಬಲ್ಪಾಡಿ ಎಂಬಲ್ಲಿ ನಡೆದಿದೆ.

ಅಂಬಲ್ಪಾಡಿ ಗ್ರಾಮದ ಸಿಪಿಸಿ ಲೇಔಟ್ ನ ಜಯಗಣೇಶ್ ಬೀಡು ಎಂಬವರ ಮನೆಗೆ ಯಾರೂ ಇಲ್ಲದ ಸಮಯ ಮನೆಯ ಹಿಂದುಗಡೆಯ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು, ಮಾಸ್ಟರ್ ಬೆಡ್ ರೂಮಿನ ಕೀ ತೆಗೆದು ಕಪಾಟು ಹಾಗೂ ಲಾಕರ್ ನ್ನು ಬಲಾತ್ಕಾರದಿಂದ ತೆಗೆದು ಕಳ್ಳತನಗೈದಿದ್ದಾರೆ. ಬಳೆ, ಮುತ್ತಿನ ಸರ, ಉಂಗುರು, ವಜ್ರದ ಕಿವಿಯೋಲೆ, ನೆಕ್ಲೇಸ್ ಸೇರಿದಂತೆ 14 ಲಕ್ಷ ರೂ. ಮೌಲ್ಯದ 332 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ ಗೆಸ್ಟ್ ರೂಮಿನ ಕಪಾಟಿನ ಲಾಕರ್ ಒಡೆದು ಅದರಲ್ಲಿದ್ದ 3,00,000 ಹಣ ಹಾಗೂ ಸುಮಾರು 1,35,000 ಮೌಲ್ಯದ 45 ಹಳೆಯ ಬೆಳ್ಳಿಯ ನಾಣ್ಯಗಳನ್ನು ಕಳವುಗೈದಿದ್ದಾರೆ. ಇದರ ಅಂದಾಜು ಮೌಲ್ಯ 18, 35,000 ಎಂದು ತಿಳಿದುಬಂದಿದೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಯುವಕನ ಹೆಸರಿನಲ್ಲಿ ಮಂಗಳಮುಖಿ ಚಾಟಿಂಗ್ ➤ ವಿಟ್ಲ ಠಾಣಾ ಮೆಟ್ಟಿಲೇರಿದ ಯುವತಿಯ ಫೇಸ್ ಬುಕ್ ಲವ್

error: Content is protected !!
Scroll to Top