ಜನರಿಗೆ ಮತ್ತೊಂದು ಬಿಗ್ ಶಾಕ್..! ➤ ಟಿವಿ ಚಾನಲ್ ದರ ಶೆ. 50ರಷ್ಟು ಹೆಚ್ಚಳ?

(ನ್ಯೂಸ್ ಕಡಬ) newskadaba.com ನವದೆಹಲಿ, ನ. 08. ಬೆಲೆಯೇರಿಕೆಯಿಂದ ತತ್ತರಿಸಿ ಹೋಗಿರುವ ಜನರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಶೀಘ್ರವೇ ಟಿ.ವಿ. ಚಾನೆಲ್ ದರ ಶೇ.50 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.


ಗ್ರಾಹಕರಿಗೆ ಟಿವಿ ಚಾನೆಲ್ ಗಳ ಗರಿಷ್ಠ ದರಕ್ಕೆ ಮಿತಿ ವಿಧಿಸಿರುವ ದೂರಸಂಪರ್ಕ ನಿಯಂತ್ರಕ ಟ್ರಾಯ್ ವಿರುದ್ಧ ಟಿವಿ ಚಾನೆಲ್ ಪ್ರಸಾರ ಕಂಪನಿಗಳು ಸುಪ್ರೀಂಕೋರ್ಟ್ ಮೊರೆ ಹೋಗಿವೆ. ಟ್ರಾಯ್ ಡಿಸೆಂಬರ್ 1 ರಿಂದ ಟಿವಿ ಚಾನೆಲ್ ಗಳ ದರದಲ್ಲಿ 12 ರೂ.ಗಳ ಮಿತಿಯನ್ನು ಅಳವಡಿಸಲು ಪ್ರಸ್ತಾಪಿಸಿತ್ತು. ಟ್ರಾಯ್ ನ ಪ್ರಸ್ತಾಪದ ವಿರುದ್ಧ ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಆಯಂಡ್ ಡಿಜಿಟಲ್ ಫೆಡರೇಷನ್ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿದೆ. ಜೊತೆಗೆ ಟಿವಿ ಚಾನೆಲ್ ಚಂದಾದಾರಿಕೆಯ ದರದಲ್ಲಿ ಏರಿಕೆಯ ಪ್ರಸ್ತಾಪವನ್ನೂ ಮುಂದಿಟ್ಟಿದೆ. ಈ ಪ್ರಸ್ತಾಪವನ್ನು ಸುಪ್ರೀಂಕೋರ್ಟ್ ಸಮ್ಮತಿಸಿದರೆ ಬಳಕೆದಾರರಿಗೆ ಡಿಸೆಂಬರ್ ನಿಂದ ಕೇಬಲ್ ಟಿವಿ ಚಂದಾದಾರಿಕೆ ದರದಲ್ಲಿ ಶೇ. 50ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕ್ರೀಡೆ, ಮನೋರಂಜನೆ, ಸಿನಿಮಾ ವಾಹಿನಿಗಳ ಚಂದಾದಾರಿಕೆ ದರ 15 ರಿಂದ 30 ರೂ. ವರೆಗೆ ಹೆಚ್ಚಳವಾಗಬಹುದು. ಕೆಲವು ಬ್ರಾಡ್ ಕಾಸ್ಟ್ ಕಂಪನಿಗಳ ಹೊಸ ದರದ ಪ್ರಕಾರ ಚಾನಲ್ 15ರಿಂದ 30 ರವರೆಗೆ ದರ ನಿಗದಿಪಡಿಸಲಾಗುವುದು ಎಂದು ಹೇಳಲಾಗುತ್ತಿದೆ.

Also Read  ಎಟಿಎಂ ನಿಂದ ನಗದು ದೋಚಿದ ಖತರ್ನಾಕ್ ಕಳ್ಳರು

error: Content is protected !!
Scroll to Top