ಬಂಟ್ವಾಳ: ಆಕಸ್ಮಿಕವಾಗಿ ತೆಂಗಿನಮರ ಮೈಮೇಲೆ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ. 08. ಮರ ಕಡಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ಮೈಮೇಲೆ ತೆಂಗಿನ ಮರ ಬಿದ್ದ ಪರಿಣಾಮ ವ್ಯಕ್ತಿಯೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಪೆರ್ಲಾಪು ನಿವಾಸಿ ಸುರೇಶ್(38) ಎಂದು ಗುರುತಿಸಲಾಗಿದೆ. ಸುರೇಶ್ ನೆರೆಮನೆಯ ಭುಜಂಗ ಶೆಟ್ಟಿ ಅವರ ಮನೆಯ ತೋಟದಲ್ಲಿದ್ದ ತೆಂಗಿನ ಮರವನ್ನು ಕಡಿಯಲು ಹೋಗಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಒಂದು ತೆಂಗಿನ ಮರ ಕಡಿದು ನೆಲಕ್ಕೆ ಬಿದ್ದಾಗ, ಅದರ ಪಕ್ಕದಲ್ಲೇ ಇದ್ದ ಸತ್ತು ಒಣಗಿದ ತೆಂಗಿನ ಮರವು ಆಕಸ್ಮಿಕವಾಗಿ ಸುರೇಶ್ ಅವರ ಮೈಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Also Read  ಧರ್ಮಸ್ಥಳ: ಕಾಡಿನಲ್ಲಿ ವೀಡಿಯೋ ಮಾಡುತ್ತಾ ವಿಷ ಸೇವಿಸಿದ ಯುವಕ

error: Content is protected !!
Scroll to Top