ಮಂಗಳೂರು: ನಿದ್ದೆ ಮಾತ್ರೆ ಬೆರೆಸಿದ ಜ್ಯೂಸ್ ಕುಡಿಸಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ➤ ಆರೋಪಿ ರೌಡಿಶೀಟರ್ ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ನ. 08. ಅಪ್ರಾಪ್ತ ಬಾಲಕಿಯ ಮೇಲೆ ರೌಡಿಶೀಟರ್‌ ಓರ್ವ ಅತ್ಯಾಚಾರ ನಡೆಸಿದ ಆರೋಪಿಯನ್ನು ಬಂಧಿಸಿದ ಘಟನೆ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಕೈಕಂಬದ ಹೊಟೇಲ್ ಒಂದರಲ್ಲಿ ಬಾಣಸಿಗನಾಗಿ ಕಾರ್ಯ ನಿರ್ವಹಿಸುತ್ತಿದ್ದ ರೌಡಿಶೀಟರ್ ನವೀನ್ ಸಿಕ್ವೇರ ಎಂದು ಗುರುತಿಸಲಾಗಿದೆ. ಈತನಿಗೆ ಬಾಲಕಿಯ ಸಹೋದರನ ಪರಿಚಯವಿದ್ದು, ಇದನ್ನೇ ನೆಪವಾಗಿಸಿ ಆಕೆಯ ನಂಬರ್ ಪಡೆದಿದ್ದ ರೌಡಿಶೀಟರ್ ಆಕೆ ಒಬ್ಬಳೇ ಮನೆಯಲ್ಲಿ ಇರುವ ವೇಳೆ ಮನೆಗೆ ಬಂದು ಬಾಲಕಿಗೆ ಜ್ಯೂಸ್ ನಲ್ಲಿ ನಿದ್ದೆ ಬರೋ ಮದ್ದು ಬೆರೆಸಿ ಅತ್ಯಾಚಾರ ನಡೆಸಿದ್ದ ಎನ್ನಲಾಗಿದೆ. ಅತ್ಯಾಚಾರವೆಸಗಿದ ಬಳಿಕ ಆರೋಪಿಯು ಉಡುಪಿಯ ಬಾರ್ ಒಂದರಲ್ಲಿ ಹೋಗಿ ಕೆಲಸ ಕೇಳಿದ್ದು, ಅಲ್ಲಿಂದ ಆರೋಪಿಯನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಇದೂ ಅಲ್ಲದೇ ಆರೋಪಿ ಮೇಲೆ ಉಳ್ಳಾಲ ಠಾಣೆಯಲ್ಲಿ ರೌಡಿಶೀಟರ್, ಗುಂಪು ಘರ್ಷಣೆ, ಸರಗಳ್ಳತನ ಸೇರಿದಂತರ ಹಲವು ಪ್ರಕರಣಗಳು ದಾಖಲಾಗಿದೆ. ಮಂಗಳೂರಿನ ಮಹಿಳಾ ಠಾಣೆಯಲ್ಲಿ ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.

Also Read  ಕುಡಿತದ ಮತ್ತಿನಲ್ಲಿ ಕೆಎಸ್ಆರ್‌ಟಿಸಿ ಬಸ್ಸಿನ ಸೀಟಿನ ಮೇಲೆ ಮೂತ್ರ ವಿಸರ್ಜನೆ ➤ದೂರು ದಾಖಲು

error: Content is protected !!
Scroll to Top