ಕಲ್ಲುಗುಡ್ಡೆ ಅಂಗನವಾಡಿಯಲ್ಲಿ ಪುಟಾಣಿಗಳಿಗೆ ಮೊಟ್ಟೆ ವಿತರಣೆ

(ನ್ಯೂಸ್ ಕಡಬ) newskadaba.com ಕಡಬ, ಜೂ.11. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖಾ ವತಿಯಿಂದ ಅಂಗನವಾಡಿ ಪುಟಾಣಿಗಳಿಗೆ ಮೊಟ್ಟೆ ನೀಡುವ ಕಾರ್ಯಕ್ರಮ ಕಲ್ಲುಗುಡ್ಡೆ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್ರವರು ಪುಟಾಣಿಗಳಿಗೆ ಮೊಟ್ಟೆ ವಿತರಿಸಿ ಮಾತನಾಡಿ, ಸರಕಾರ ಮಕ್ಕಳ ಆರೋಗ್ಯ ಹಾಗೂ ಅವರ ಪೋಷಣೆಗೆ ಸಹಕರಿಸುತ್ತಿದೆ. ಅಗತ್ಯ ಪೋಷಕಾಂಶವುಳ್ಳ ಮೊಟ್ಟೆ ಮಕ್ಕಳ ಆರೋಗ್ಯಪುರ್ಣ ಬೆಳವಣಿಗೆಗೆ ಪುರಕ ಎಂದರು.

ನೂಜಿಬಾಳ್ತಿಲ ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ ಮಾತನಾಡಿ, ಶಿಕ್ಷಣ ಕ್ಷೇತ್ರದ ಅಭಿವೃದ್ದಿಗೆ ಸರಕಾರ ವಿವಿಧ ಯೋಜನೆಗಳ ಮೂಲಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಅಂಗನವಾಡಿಯಲ್ಲಿಯೇ ಶಾಲಾ ಪುರ್ವ ಶಿಕ್ಷಣವನ್ನು ಪಡೆಯವುದರೊಂದಿಗೆ ಒತ್ತಡವಿಲ್ಲದೆ ಮಕ್ಕಳ ಬೆಳವಣಿಗೆಯಾಗಬೇಕೆಂಬ ದೃಷ್ಟಿಯಿಂದ ಸಹಕರಿಸುತ್ತಿದೆ ಎಂದರು. ಬಾಲವಿಕಾಸ ಸಮಿತಿ ಅಧ್ಯಕ್ಷ ರಾಮಚಂದ್ರ ಗೌಡ ಶುಭಹಾರೈಸಿದರು. ಗ್ರಾ.ಪಂ.ಸದಸ್ಯೆ ರಜಿತಾ ಪದ್ಮನಾಭ, ನೂಜಿಬಾಳ್ತಿಲ ವಿಜಯಬ್ಯಾಂಕ್ ಸಿಬ್ಬಂದಿ ಲತಾ, ಪೋಷಕರಾದ ಸವಿತಾ ಪಾಲೆತ್ತಡ್ಕ, ಆರ್ಟಿಸ್ಟ್‌ ಸುಂದರ ಕೊಕ್ಕಡ ಮೊದಲಾದವರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಅಮೀನ ಕೆ. ಸ್ವಾಗತಿಸಿ, ಪ್ರಾಸ್ತಾವಿಸಿದರು. ಭವಿತಾ ವಂದಿಸಿದರು. ಅಂಗನವಾಡಿ ಸಹಾಯಕಿ ಜಮಿಳಾ ಸಹಕರಿಸಿದರು.

error: Content is protected !!
Scroll to Top