ಅರಂತೋಡು: ಅಗಲಿದ ಸಮಸ್ತ ನೇತಾರರಿಗೆ ವಿಶೇಷ ಪ್ರಾರ್ಥನೆ

(ನ್ಯೂಸ್ ಕಡಬ) newskadaba.com ಅರಂತೋಡು, ನ. 08. ನುಸ್ರತ್ತುಲ್ ಇಸ್ಲಾಂ ಮದರಸ ಅರಂತೋಡು ಇದರ ವತಿಯಿಂದ ಸಮಸ್ತ ಕೇರಳ ಮತ ವಿಧ್ಯಾಭ್ಯಾಸ ಬೋರ್ಡ್ ವರ್ಷಂಪ್ರತಿ ನಡೆಸಿಕೊಂಡು ಬರುವ ಪ್ರಾರ್ಥನಾ ದಿನವನ್ನು ನವಂಬರ್ 7 ರಂದು ಅರಂತೋಡು ಮದರಸ ಸಭಾಂಗಣದಲ್ಲಿ ನಡೆಸಲಾಯಿತು.


ಸಮಾರಂಭದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ವಹಿಸಿದ್ದರು. ಮಸೀದಿ ಖತೀಬರಾದ ಬಹು ಅಲ್ ಹಾಜ್ ಇಸ್ಹಾಖ್ ಬಾಖವಿ ದುವಾ ನೆರವೇರಿಸಿ ಮಾತನಾಡಿ, ಸಮಸ್ತ ಇತರ ಸ್ಥಾಪನೆಗಳಿಗೆ ರಾಜ್ಯದಲ್ಲಿ ದೇಶದಲ್ಲಿ ಹಾಗೂ ವಿದೇಶದಲ್ಲಿ ಸ್ಥಾಪಿಸಿ ಸಮುದಾಯದ ಉನ್ನತಿಗೆ ಶ್ರಮಿಸಿ ನಮ್ಮನ್ನಗಲಿದ ಉಲಮಾ ಉಮರಾ ಸೇವೆಯನ್ನು ಕೊಂಡಾಡಿದರು. ನುಸ್ರತುಲ್ ಇಸ್ಲಾಂ ಮದರಸ ಸದರ್ ಮುಅಲ್ಲಿಂ ಹನೀಫ್ ದಾರಿಮಿ ಪ್ರಾಸ್ತಾವಿಕ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷ ಹಾಗೂ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೇಶನ್ ಗೌರವಾಧ್ಯಕ್ಷ ಟಿ.ಎಮ್.ಶಹೀದ್, ಜಮಾಅತ್ ಕಾರ್ಯದರ್ಶಿ ಕೆ.ಎಮ್. ಮೂಸಾನ್, ಸ್ವಲಾತ್ ಸಮಿತಿ ಉಪಾಧ್ಯಕ್ಷ ಅಬೂಬಕ್ಕರ್ ಪಾರೆಕ್ಕಲ್, ಮದರಸ ಮ್ಯಾನೇಜ್‌ಮೆಂಟ್ ಸಂಚಾಲಕ ಅಮೀರ್ ಕುಕ್ಕುಂಬಳ, ಅನ್ವಾರುಲ್ ಯಂಗ್ ಮೆನ್ಸ್ ಎಸೋಸಿಯೆಶನ್ ಅಧ್ಯಕ್ಷ ಮಜೀದ್, ಸೌದಿ ಸಮಿತಿ ಪ್ರತಿನಿಧಿ ಕೆ.ಎಮ್. ಉಸ್ಮಾನ್, ಜೊತೆ ಕಾರ್ಯದರ್ಶಿ ಎ. ಹನೀಫ್, ಎಸ್ಕೆಎಸ್ಸೆಸ್ಸೆಫ್ ಕಾರ್ಯದರ್ಶಿ ಜುಬೈರ್, ಎಸ್.ಇ.ಹನೀಫ್, ಮುಝ್ಝಮ್ಮಿಲ್ ಕುಕ್ಕುಂಬಳ, ಎ.ಹಮೀದ್ ಮೊದಲಾದವರು ಉಪಸ್ಥಿತರಿದ್ದರು. ಸಹಾಯಕ ಅಧ್ಯಾಪಕ ಸಾಜಿದ್ ಅಝ್ಝಹರಿ ವಂದಿಸಿದರು.

Also Read  ಚಾರ್ಮಾಡಿಯಲ್ಲಿ ರಾತ್ರಿ 10.30ರವರೆಗೆ ತೆರಳದ ಮತಗಟ್ಟೆ ಅಧಿಕಾರಿಗಳು ➤ ಅನುಮಾನಗೊಂಡು ಸೇರಿದ ಜನ, ಕೆಲಕಾಲ ಗೊಂದಲ ಸೃಷ್ಟಿ

error: Content is protected !!
Scroll to Top