(ನ್ಯೂಸ್ ಕಡಬ) newskadaba.com ಕಾಪು, ನ. 06. ಬೆಳಗ್ಗೆ ವಾಕಿಂಗ್ ಗೆಂದು ಹೋಗಿದ್ದ ವ್ಯಕ್ತಿಗೆ ಆಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ರಾ.ಹೆ. 66ರ ಕಾಪುವಿನ ಕೋತಲ್ ಕಟ್ಟೆಯ ಬಳಿ ನಡೆದಿದೆ.
ಮೃತರನ್ನು ಉಳಿಯಾರಗೋಳಿ ಗ್ರಾಮದ ಕೆಳತೋಟ ನಿವಾಸಿ ಗೋವಿಂದ ಪೂಜಾರಿ (65) ಎಂದು ಗುರುತಿಸಲಾಗಿದೆ. ಇವರು ಕೋತಲ್ ಕಟ್ಟೆಯ ಬಳಿ ವಾಕಿಂಗ್ ಗೆಂದು ತೆರಳಿದ್ದ ಸಂದರ್ಭ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಅಂಬುಲೆನ್ಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ತಕ್ಷಣವೇ ಗೋವಿಂದ ಪೂಜಾರಿಯವರನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.