ಬೆಳ್ತಂಗಡಿ: ಚಾಲಕರಿಬ್ಬರ ನಡುವೆ ವಾಗ್ವಾದ ➤ ಓರ್ವನಿಗೆ ಹಲ್ಲೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ. 06. ಜೀಪು ಚಾಲಕ ಮತ್ತು ಆಟೋ ಚಾಲಕನ ನಡುವೆ ಮಾತಿನ ಚಕಮಕಿ ನಡೆದು ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಉಜಿರೆಯ ಸೋಮಂತಡ್ಕ ಎಂಬಲ್ಲಿ ನಡೆದಿದೆ.

ಹಲ್ಲೆಗೊಳಗಾದ ಅಟೋ ಚಾಲಕನನ್ನು ಅಮೃತ್ ಅಲ್ಬರ್ಟ್ ಮೋನಿಸ್ (52) ಎಂದು ಗುರುತಿಸಲಾಗಿದೆ. ಆಟೋದಲ್ಲಿ ಕುಳಿತಿದ್ದ ಪ್ರಯಾಣಿಕರನ್ನು ಜೀಪು ಚಾಲಕ ಕರೆದುಕೊಂಡು ಹೋಗಿ ಜೀಪಿನಲ್ಲಿ ಕುಳ್ಳಿರಿಸಿದ್ದ ಇದನ್ನು ಪ್ರಶ್ನಿಸಿದ್ದ ಮೋನಿಸ್ ಮೇಲೆ ಜೀಪು ಚಾಲಕ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

Also Read  ಕಡಬ: ದ್ವಿಚಕ್ರ ವಾಹನ ಢಿಕ್ಕಿ- ಪಾದಚಾರಿ ಮಹಿಳೆ ಮೃತ್ಯು

error: Content is protected !!