ದಾಸ್ತಾನು ವಿವರ ನಮೂದಿಸಲು ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 05. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಎಲ್ಲಾ ಖಾದ್ಯತೈಲ ಬೀಜಗಳ ಸಂಸ್ಕರಣೆದಾರರು, ಆಮದುದಾರರು, ಗಿರಣಿದಾರರು, ಸಗಟು ಮಾರಾಟಗಾರರು ಮತ್ತು ಸ್ಟಾಕಿಸ್ಟ್ ಗಳು ಕೇಂದ್ರ ಸರ್ಕಾರದ https://evegoils.nic.in/eosp/login ವೆಬ್ ಸೈಟಿನಲ್ಲಿ ಇ-ಮೇಲ್ ಐಡಿ ಮತ್ತು ಪಾಸ್ ವರ್ಡ್ ನ್ನು ಸೃಜಿಸಿಕೊಂಡು ಪ್ರತಿ ವಾರ ತಾವು ಹೊಂದಿರುವ ಖಾದ್ಯತೈಲ ಮತ್ತು ತೈಲ ಬೀಜಗಳ ದಾಸ್ತಾನಿನ ವಿವರವನ್ನು ಕಡ್ಡಾಯವಾಗಿ ನೊಂದಾಯಿಸಿಕೊಳ್ಳಬೇಕು.


ಹೆಚ್ಚಿನ ವಿವರಗಳಿಗೆ ಸಹಾಯಕ ನಿರ್ದೇಶಕರ ಕಛೇರಿ ದೂ. ಸಂ. 0824- 2423622, ಮಂಗಳೂರು ತಹಶೀಲ್ದಾರರ ಕಚೇರಿ ದೂ.ಸಂ:0824 2412033, ಬಂಟ್ವಾಳ ತಹಶೀಲ್ದಾರರ ಕಛೇರಿ ದೂ.ಸಂ: 08255- 232125 ಪುತ್ತೂರು ತಹಶೀಲ್ದಾರರ ಕಚೇರಿ ದೂ.ಸಂ: 08251 231349, ಬೆಳ್ತಂಗಡಿ ತಹಶೀಲ್ದಾರರ ಕಚೇರಿ ದೂ.ಸಂ: 08256 232383, ಸುಳ್ಯ ತಹಶೀಲ್ದಾರರ ಕಛೇರಿ ದೂ.ಸಂ: 08257 231330. ತಮ್ಮ ತಾಲ್ಲೂಕಿನ ಆಹಾರ ಶಾಖೆಯನ್ನು ಹಾಗೂ ಮಂಗಳೂರು ಮಹಾನಗರ ಪಾಲಿಕೆ ಹಾಗೂ ಉಳ್ಳಾಲ ನಗರ ಪಂಚಾಯತ್ ವ್ಯಾಪ್ತಿಗೆ ಜಿಲ್ಲಾಧಿಕಾರಿ ಕಚೇರಿಯ ಅನೌಪಚಾರಿಕ ಪಡಿತರ ಪ್ರದೇಶದ ಸಹಾಯಕ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬೇಕು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಸುಳ್ಯ: ಸಾರ್ವಜನಿಕ ಸ್ಥಳದಲ್ಲಿ ಇಬ್ಬರ ಮೇಲೆ ಹಲ್ಲೆ

error: Content is protected !!
Scroll to Top