ಎಪಿಎಂಸಿ ರಸ್ತೆ ಬದಿಯಲ್ಲಿ ಕಸ ಬಿಸಾಡಿದ ಆರೋಪ ➤ ದಂಡ ವಿಧಿಸಿದ ನಗರಸಭೆ

(ನ್ಯೂಸ್ ಕಡಬ) newskadaba.com ಪುತ್ತೂರು, ನ. 05. ಇಲ್ಲಿನ ನಗರಸಭಾ ವ್ಯಾಪ್ತಿಯ ಎಪಿಎಂಸಿ ರಸ್ತೆಯಲ್ಲಿ ಇಲಾಖೆಯ ನೌಕರರೋರ್ವರಿಗೆ ಬೀದಿ ಬದಿ ಕಸ ಎಸೆದ ಪ್ರಕರಣಕ್ಕೆ ಸಂಬಂಧಿಸಿ ನಗರಸಭೆಯಿಂದ ದಂಡ ವಿಧಿಸಿದ ಘಟನೆ ನಡೆದಿದೆ.

ಎಪಿಎಂಸಿ ರೈಲ್ವೇ ಬ್ರಿಡ್ಜ್ ಬಳಿಯ ಸೇತುವೆ ಸಮೀಪ ವ್ಯಕ್ತಿಯೋರ್ವರು ಕಾರಿನಲ್ಲಿ ಬಂದು ರಸ್ತೆ ಬದಿಯಲ್ಲಿ ಕಸದ ಕಟ್ಟನ್ನು ಬಿಸಾಡಿದ್ದು, ಇದನ್ನು ಗಮನಿಸಿದ ಅದೇ ರಸ್ತೆಯಲ್ಲಿ ಬರುತ್ತಿದ್ದ ನಗರಸಭೆ ಸದಸ್ಯರೋರ್ವರು ಕೂಡಲೇ ಪೊಲೀಸ್ ದೂರು ನೀಡಿದ್ದಾರೆ. ತಕ್ಷಣವೇ ಕಸ ಬಿಸಾಡಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಇಲಾಖೆಯ ನೌಕರ ಎಂದು ತಿಳಿದುಬಂದಿದೆ. ಬಳಿಕ ನಗರಸಭೆ ಅಧಿಕಾರಿಗಳು ಠಾಣೆಗೆ ಬಂದು ದಂಡ ವಿಧಿಸಿದ್ದಾರೆ ಎನ್ನಲಾಗಿದೆ.

Also Read  ಮಂಗಳೂರು: ಅಕ್ರಮ ಕಳ್ಳಭಟ್ಟಿಗೆ ಕಡಿವಾಣ ➤ ಡಾ.ರಾಜೇಂದ್ರ ಕೆವಿ

error: Content is protected !!
Scroll to Top