ಯುವ ಪರಿವರ್ತಕರ ಹುದ್ದೆಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 05. ಬೆಂಗಳೂರಿನ ನಿಮ್ಹಾನ್ಸ್ ನ ಎಪಿಡೀಮಿಯಾಜಿ ವಿಭಾಗದಲ್ಲಿ ಖಾಲಿ ಇರುವ ಯುವ ಪರಿವರ್ತಕರ ಹುದ್ದೆಗೆ ಗೌರವಧನದ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.


ಶೈಕ್ಷಣಿಕ ಅರ್ಹತೆ- ಯಾವುದೇ ಪದವಿ ಹಾಗೂ ಮೇಲ್ಪಟ್ಟು ಪದವೀಧರ ಯುವಜನತೆ ಅವಶ್ಯವಿರುವ ಕೌಶಲ್ಯ, ಸ್ಥಳೀಯ ಭಾಷೆ, ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಬೇಕು. ಸಮುದಾಯದಲ್ಲಿ ಕೆಲಸ ಮಾಡಲು ಆಸಕ್ತಿ ಹಾಗೂ ಉತ್ತಮ ಅಂತರ್‌ ವ್ಯಕ್ತಿಯ ಸಂವಹನ ಕೌಶಲ್ಯ ಜೊತೆಗೆ ಸಂವಾದ ಕೌಶಲ್ಯಗಳನ್ನು ಹೊಂದಿರಬೇಕು. ಸಮುದಾಯದಲ್ಲಿ ಯುವಜನರಿಗೆ ತರಬೇತಿಯಂತಹ ಕಾರ್ಯಕ್ರಮಗಳನ್ನು ನಡೆಸಬೇಕು. 21 ರಿಂದ 35 ವರ್ಷ ವಯೋಮಿತಿಯ ಆಸಕ್ತಿಯುಳ್ಳವರು ಉಪ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳಾ ಕ್ರೀಡಾಂಗಣ, ಮಂಗಳೂರು, ಇಲ್ಲಿಗೆ ಇದೇ ನ.12 ರೊಳಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಮೂಡಬಿದ್ರೆ, ತಾಲೂಕಿನವರಿಗೆ ಆದ್ಯತೆ ಇದೆ. ಹೆಚ್ಚಿನ ಮಾಹಿತಿಗಾಗಿ ಯುವಸ್ಪಂದನ ಕಛೇರಿ ದೂ.ಸಂ. 08242452264, ಯುವಸ್ಪಂದನದ ಕ್ಷೇತ್ರ ಸಂಪರ್ಕಾಧಿಕಾರಿ ಸುನಿಲ್ ಕುಮಾರ್ ಎನ್. ದೂ. ಸಂ. 9164928960 ಮತ್ತು ಯುವ ಸಮಾಲೋಚಕ ಆದರ್ಶ ಶೆಟ್ಟಿ. ದೂ.ಸಂ.7259188435 ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಮಾ. 27ರಿಂದ 5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ➤ ವೇಳಾಪಟ್ಟಿ ಪ್ರಕಟ

error: Content is protected !!
Scroll to Top