ನ. 07ರಂದು ನೇತ್ರ ತಪಾಸಣಾ ಶಿಬಿರ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 05. ನ. 07 ರವಿವಾರದಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿ ಮೇರಿಹಿಲ್, ಮಂಗಳೂರು, ಇಲ್ಲಿ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರ ಅಧ್ಯಕ್ಷತೆಯಲ್ಲಿ, ಮಂಗಳಾ ಅರೆ ವೈದ್ಯಕೀಯ ಕಾಲೇಜು, ಅಪ್ಟೊಮೆಟ್ರಿ ಇವರ ಸಹಯೋಗದೊಂದಿಗೆ, ಲಯನ್ಸ್ ಕ್ಲಬ್ ಮಂಗಳೂರು, ಇವರ ಸಹಭಾಗಿತ್ವದಲ್ಲಿ, ನೇತ್ರ ತಪಾಸಣಾ ಶಿಬಿರವು ಬೆಳಗ್ಗೆ 9:00 ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ ನಡೆಯಲಿದೆ.


ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳಾ ಸಮೂಹ ವಿದ್ಯಾಸಂಸ್ಥೆಯ ಚೇರ್ಮನ್, ಡಾ|| ಗಣಪತಿ ಪಿ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್‍ನ ಗವರ್ನರ್ ಲಯನ್ ವಸಂತ್ ಕುಮಾರ್ ಶೆಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷರು ಲಯನ್ ಶ್ರೀ ಬಿ.ಸತೀಶ್ ರೈ, ಮಂಗಳಾ ಅರೆ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಪ್ರತಿಜ್ಞಾ ಸುಹಾಸಿನಿ, ಡಾ|| ಶ್ರೀಪತಿ ಕಾಮತ್ ನೇತ್ರ ತಜ್ಞರು, ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಉಪ ಸಮಾದೇಷ್ಟರಾದ ರಮೇಶ್ ಇವರು ಆಗಮಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಲ್ಲಾ ಘಟಕದ ಗೃಹರಕ್ಷಕರಿಗೆ ಹಾಗೂ ಅವರ ಕುಟುಂಬದವರಿಗೆ ಉಚಿತ ಕಣ್ಣಿನ ಪರೀಕ್ಷೆ ಮಾಡಲಾಗುವುದು ಹಾಗೂ ಅಗತ್ಯ ಇರುವವರಿಗೆ ಉಚಿತ ಕನ್ನಡಕ ವಿತರಿಸಲಾಗುವುದು. ಭಾಗವಹಿಸಿದ ಎಲ್ಲರಿಗೂ ಬೆಳಿಗ್ಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ಇದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಅತ್ಯಾಚಾರ ಆರೋಪ: ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ವಿರುದ್ಧ ಎಫ್ಐಆರ್ ದಾಖಲು

error: Content is protected !!
Scroll to Top