ಪಟಾಕಿ ತರಲೆಂದು ತೆರಳಿದ್ದ ಬಾಲಕನ ಹತ್ಯೆಗೈದ ದುಷ್ಕರ್ಮಿಗಳು..! ➤ ಓರ್ವನ ಬಂಧನ

(ನ್ಯೂಸ್ ಕಡಬ) newskadaba.com ಮೈಸೂರು, ನ. 05. 4 ಲಕ್ಷ ರೂ. ಗೆ ಬೇಡಿಕೆ ಇಟ್ಟು, ಬಾಲಕನೋರ್ವನನ್ನು ಕಿಡ್ನಾಪ್ ಮಾಡಿದ್ದ ದುಷ್ಕರ್ಮಿಗಳ ತಂಡವೊಂದು ಹಣ ದೊರಕುವುದಿಲ್ಲವೆಂದು ಖಚಿತವಾದ ಬಳಿಕ ಬಾಲಕನನ್ನು ಹತ್ಯೆ ಮಾಡಿ ಮೃತದೇಹವನ್ನು ಕೆರೆಯೊಂದರ ಬಳಿ ಬಿಸಾಡಿ ಹೋದ ಘಟನೆ ಹುಣಸೂರ ತಾಲೂಕಿನ ಹನಗೋಡಿನಲ್ಲಿ ನಡೆದಿದೆ.

ಕೊಲೆಯಾದ ಬಾಲಕನನ್ನು ಹನಗೋಡು ಗ್ರಾಮದ ತರಕಾರಿ ವ್ಯಾಪಾರಿ ನಾಗರಾಜ್ ಎಂಬವರ ಪುತ್ರ ಕಾರ್ತಿಕ್ (9) ಎಂದು ಗುರುತಿಸಲಾಗಿದೆ. ಕಾರ್ತಿಕ್ ಬುಧವಾರದಂದು ಸಂಜೆ 7.30ರ ವೇಳೆಗೆ ಪಟಾಕಿ ತರಲೆಂದು ಮನೆಯಿಂದ ಹೋಗಿದ್ದ ವೇಳೆ ಯಾರೋ ಅಪರಿಚಿತರು ಅಪಹರಿಸಿದ್ದರು. ಬಳಿಕ ಬಾಲಕನ ತಂದೆ ನಾಗರಾಜ್ ರನ್ನು ಸಂಪರ್ಕಿಸಿ, ಹಣಕ್ಕೆ ಬೇಡಿಕೆಯಿಟ್ಟಿದ್ದು, 4 ಲಕ್ಷ ರೂ. ನೀಡಿದಲ್ಲಿ ಮಗನನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದ ಈತ ಪೊಲೀಸರಿಗೆ ದೂರು ನೀಡಿದಲ್ಲಿ ಮಗುವನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಗಾಬರಿಗೊಂಡ ಪೋಷಕರು ತಕ್ಷಣವೇ ಹುಣಸೂರು ಗ್ರಾಮಾಂತರ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ‌. ಪೊಲೀಸರು ಮೊಬೈಲ್ ಕರೆಯನ್ನಾಧರಿಸಿ ಓರ್ವ ಆರೋಪಿ ಜವರಯ್ಯ ಎಂಬಾತನ ಹೆಡೆಮುರಿ ಕಟ್ಟಿ, ವಿಚಾರಣೆಯ ವೇಳೆ ಆತ ಬಾಲಕನನ್ನು ಕೊಂದಿರುವುದಾಗಿ ಬಾಯ್ಬಿಟ್ಟಿದ್ದಾನೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನುಳಿದ ಆರೋಪಿಗಳಿಗೆ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ಸಾರೆ.

Also Read  ಅನಗತ್ಯವಾಗಿ ಮಧ್ಯಾಹ್ನದ ಬಳಿಕ ಜನರು ಪೇಟೆಗೆ ಬಂದರೆ ಕಾನೂನು ಕ್ರಮ ➤ ಕಡಬ ಠಾಣಾ ಎಸ್ಐ ರುಕ್ಮ ನಾಯ್ಕ್ ಎಚ್ಚರಿಕೆ

error: Content is protected !!
Scroll to Top