ಗೃಹ ಸಚಿವರ ಹೆಸರಲ್ಲಿ ಡ್ಯಾನ್ಸ್ ಬಾರ್ ಗಳಿಗೆ ಪರವಾನಿಗೆ ಕೊಡಿಸುವುದಾಗಿ ವಂಚನೆ ➤ ಆರೋಪಿ ಸಿಸಿಬಿ ವಶಕ್ಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 05. ಗೃಹ ಸಚಿವರ ಹೆಸರಲ್ಲಿ ಡ್ಯಾನ್ಸ್ ಬಾರ್ ಗಳಿಗೆ ಲೈಸೆನ್ಸ್ ಕೊಡಿಸುವುದಾಗಿ ವಂಚಿಸುತ್ತಿದ್ದ ಆರೋಪಿಯೋರ್ವನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.

ಬಂಧಿತ ಆರೋಪಿಯನ್ನು ಭವಾನಿರಾವ್ ಮೋರೆ ಎಂದು ಗುರುತಿಸಲಾಗಿದೆ. ಈತ ಸುರೇಶ್ ಎಂಬವರಿಂದ 25 ಲಕ್ಷ ರೂ. ಪಡೆದು ವಂಚನೆ ಮಾಡಿದ್ದು, ಈ ಕುರಿತಂತೆ ಸುರೇಶ್ ಅವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಶಿವಮೊಗ್ಗದಲ್ಲಿ ವಶಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಈತ ಸದ್ಯ ಕೆಪಿಟಿಸಿಎಲ್ ನಿರ್ದೇಶಕನಾಗಿದ್ದ ಎಂದು ತಿಳಿದುಬಂದಿದೆ.

Also Read  ಎಡಮಂಗಲ ಪ್ರೌಢಶಾಲೆಗೆ ಸಹಕಾರಿ ಸಂಘದಿಂದ ಇನ್ವರ್ಟರ್ ಕೊಡುಗೆ

error: Content is protected !!
Scroll to Top