ಕೌಟುಂಬಿಕ ಕಲಹ ➤ ವಿಡಿಯೋ ಕರೆ ಮಾಡಿ ಆತ್ಮಹತ್ಯೆಗೈದ ಕೇಂದ್ರ ಕಾರಾಗೃಹದ ವಾರ್ಡನ್

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ನ. 05. ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿಗೆ ವೀಡಿಯೋ ಕರೆ ಮಾಡಿ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದ ಕೇಂದ್ರ ಕಾರಾಗೃಹದ ವಸತಿ ಗೃಹದಲ್ಲಿ ನಡೆದಿದೆ.


ಮೃತ ವ್ಯಕ್ತಿಯನ್ನು ಕೇಂದ್ರ ಕಾರಾಗೃಹದ ವಾರ್ಡನ್ ಅಸ್ಪಾಕ್ ತಗಡಿ (24) ಎಂದು ಗುರುತಿಸಲಾಗಿದೆ. ಮೂಲತಃ ಬೆಳಗಾವಿ ಜಿಲ್ಲೆ ಹುಕ್ಕೇರಿ ಮೂಲದ ನಿವಾಸಿಯಾದ ಇವರು ಕಳೆದ ಎರಡೂವರೆ ವರ್ಷದಿಂದ ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ವಾರ್ಡನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ವಿವಾಹವಾಗಿದ್ದ ಅಸ್ಪಾಕ್ ಅವರಿಗೆ ಒಂದೂವರೆ ತಿಂಗಳ ಮಗುವಿದ್ದು, ಪತ್ನಿ ಬಾಣಂತನಕ್ಕೆ ತವರು ಮನೆಗೆ ತೆರಳಿದ್ದರು.

Also Read  ಜೇಸಿಐ ಕಡಬ ಕದಂಬ ಅಧ್ಯಕ್ಷರಾಗಿ ಅಭಿಷೇಕ್. ಜಿ.ಎಂ ಹಾಗೂ ಕಾರ್ಯದರ್ಶಿಯಾಗಿ ರಾಜೇಶ್ಎ.ಕೆ ಆಯ್ಕೆ  

ವಿವಾಹವಾಗಿ ಎರಡು ಮೂರು ತಿಂಗಳಿನಿಂದಲೇ ಸಣ್ಣ ಪುಟ್ಟ ವಿಷಯಕ್ಕೆ ಜಗಳವಾಡುತ್ತಿದ್ದ ಇವರು, ಬುಧವಾರ ರಾತ್ರಿ ಪತ್ನಿಗೆ ವೀಡಿಯೋ ಕರೆ ಮಾಡಿದ್ದ ಸಂದರ್ಭದಲ್ಲೂ ಜಗಳವಾಡಿದ್ದಾನೆ. ಅಲ್ಲದೇ ಅತ್ತೆ ಮಾವನೊಂದಿಗೂ ಸಹ ಜಗಳವಾಡಿದ್ದು, ಈ ವೇಳೆಯೇ ನೇಣು ಹಾಕಿಕೊಳ್ಳುವ ದೃಶ್ಯವನ್ನು ಪತ್ನಿಗೆ ತೋರಿಸಿದ್ದಾನೆ. ಪತಿಯ ನಿರ್ಧಾರಕ್ಕೆ ಕಂಗಾಲಾದ ಪತ್ನಿ ಕಾರಾಗೃಹದ ಸಿಬ್ಬಂದಿ ಗಮನಕ್ಕೆ ತಂದಿದ್ದು, ವಿಷಯ ತಿಳಿದ ಸಿಬ್ಬಂದಿ ವಸತಿಗೃಹಕ್ಕೆ ತೆರಳಿ ನೋಡುವಷ್ಟರಲ್ಲಿ ಅಸ್ಪಾಕ್ ತಗಡಿ ಕೊನೆಯುಸಿರು ಎಳೆದಿದ್ದಾನೆ. ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top