(ನ್ಯೂಸ್ ಕಡಬ) newskadaba.com ಕಲಬುರ್ಗಿ, ನ. 04. ಬೆಳ್ಳಂಬೆಳಿಗ್ಗೆ ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಹತ್ಯೆಯಾದವರನ್ನು ವಿದ್ಯಾನಗರ ನಿವಾಸಿ ಪೊಲೀಸ್ ಪೇದೆ ಚಂದ್ರಕಾಂತ್ ಎಂಬವರ ಮಗ ಅಭಿಷೇಕ್(27) ಎಂದು ಗುರುತಿಸಲಾಗಿದೆ. ಅಭಿಷೇಕ್ ಜಿಮ್ ಗೆಂದು ಮನೆಯಿಂದ ಬೈಕ್ ಮೂಲಕ ತೆರಳಿದ್ದು, ಈ ವೇಳೆ ಆತನನ್ನು ಬೆನ್ನಟ್ಟಿದ ಏಳೆಂಟು ಜನರ ದುಷ್ಕರ್ಮಿಗಳ ಗುಂಪೊಂದು ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಎದುರೇ ಮಾರಕಾಸ್ತ್ರಗಳಿಂದ ಕೊಚ್ಚಿ ಹಾಕಿದ್ದಾರೆ ಎನ್ಮಲಾಗಿದೆ.