‘ಅಪ್ಪು’ ಅಗಲಿಕೆ ಬೆನ್ನಲ್ಲೇ ಬ್ಲೇಡ್ ನಲ್ಲಿ ಅಪ್ಪು ಎಂದು ಕುಯ್ದುಕೊಂಡು ಅಸ್ವಸ್ಥಳಾದ ವಿದ್ಯಾರ್ಥಿನಿ..! ➤ “ಐ ಲವ್ ಯೂ, ಐ ವಾಂಟ್ ಯೂ ಅಪ್ಪು” ಎಂದು ರಕ್ತದಲ್ಲೇ ಬರೆದುಕೊಂಡ ಅಭಿಮಾನಿ

(ನ್ಯೂಸ್ ಕಡಬ) newskadaba.com ಚಾಮರಾಜನಗರ, ನ. 04. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ನಿಧನದ ಬೆನ್ನಲ್ಲೇ, ನೊಂದ ಪುನೀತ್ ಅಭಿಮಾನಿಗಳು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ನಡುವೆ ಅಗಲಿದ ಅಪ್ಪು ಹೆಸರನ್ನು ವಿದ್ಯಾರ್ಥಿನಿಯೋರ್ವಳು ಬ್ಲೇಡ್​ ಮೂಲಕ ತನ್ನ ಕೈ ಮೇಲೆ ಬರೆದುಕೊಂಡಿದ್ದು, ಪರಿಣಾಮ ಆಕೆ ಅಸ್ವಸ್ಥಳಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಚಾಮರಾಜನಗರ ಮೈಸೂರಿನ ಹಾಸ್ಟೆಲ್​ವೊಂದರಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಈಕೆ, ನಟನ ಅಗಲಿಕೆಯಿಂದ ತೀವ್ರ ಆಘಾತಕ್ಕೊಳಗಾಗಿ ಬ್ಲೇಡ್​ನಲ್ಲಿ ಕೈ ಕೊಯ್ದುಕೊಂಡು ‘ಅಪ್ಪು’ ಎಂದು ಬರೆದುಕೊಂಡಿದ್ದಾಳೆ. ಅಲ್ಲದೇ ಅದರ ಜೊತೆಗೆ ಬಿಳಿ ಹಾಳೆ ಹಾಗೂ ಕರವಸ್ತ್ರದ ಮೇಲೆ ರಕ್ತದಿಂದ ” ಐ ಲವ್ ಯು ಅಪ್ಪು, ಐ ವಾಂಟ್ ಯು, ಐ ಲವ್ ಪುನೀತ್ ರಾಜ್​ಕುಮಾರ್ ” ಎಂದೂ ಬರೆದುಕೊಂಡಿದ್ದಾಳೆ. ಅಸ್ವಸ್ಥಳಾಗಿದ್ದ ಆಕೆಯನ್ನು ಸಹಪಾಠಿಗಳು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

Also Read  ಬೆಂಗಳೂರಲ್ಲಿ ಫೆ.12. ರಂದು 'ಏರ್ ಶೋ' ಆರಂಭ 

error: Content is protected !!
Scroll to Top