ಕೆಲಸಕ್ಕೆ ಬಂದ ಕೆಲಸಗಾರನಿಂದಲೇ ಚಿನ್ನ ಕಳ್ಳತನ..!

(ನ್ಯೂಸ್ ಕಡಬ) newskadaba.com ಕಾರ್ಕಳ, ನ. 03. ತೋಟದ ಕೆಲಸಕ್ಕೆಂದು ಬಂದ ಕೆಲಸಗಾರನೋರ್ವ ಮನೆ ಒಡತಿಯ ಚಿನ್ನದ ಉಂಗುರ ಕಳವುಗೈದ ಘಟನೆ ಕಾರ್ಕಳದಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಜಯಪ್ರಕಾಶ್ ಎಂದು ಗುರುತಿಸಲಾಗಿದೆ. ಗುಂಡ್ಯಡ್ಕ ನಿವಾಸಿ ದೇಜು ಶೆಟ್ಟಿ ಎಂಬವರ ಮನೆಗೆ ತೋಟದ ಕೆಲಸಕ್ಕೆಂದು ಬರುತ್ತಿದ್ದ ಜಯಪ್ರಕಾಶ್, ಮನೆಯೊಡತಿ ಸರಳ ಶೆಟ್ಟಿ ರವರು ಸ್ನಾನಕ್ಕೆ ಹೋಗಿದ್ದ ಸಂದರ್ಭ ಅವರ ಬೆಡ್ ರೂಂನಲ್ಲಿದ್ದ ಚಿನ್ನದ ಉಂಗುರವನ್ನು ಕಳವು ಮಾಡಿದ್ದಾನೆ ಎನ್ನಲಾಗಿದೆ.

ಆರೋಪಿಯು ಕಳವುಗೈದ ಉಂಗುರವನ್ನು ಸೊಸೈಟಿ ಒಂದರಲ್ಲಿ ಅಡವಿಟ್ಟು ಆರು ಸಾವಿರ ರೂ. ಸಾಲವಾಗಿ ಪಡೆದು ಮನೆಯವರಿಗೆ ತನ್ನ ಮೇಲೆ ಸಂಶಯ ಬರಬಾರದೆಂದು, ಮನೆಯವರು ಉಂಗುರವನ್ನು ಹುಡುಕಾಡುತ್ತಿದ್ದ ವೇಳೆ ತಾನೂ ಸೇರಿ ಹುಡುಕಾಡುವಂತೆ ನಟಿಸಿ ಅವರ ಜೊತೆಯಲ್ಲಿಯೇ ಇದ್ದನು. ಕೆಲ ದಿನಗಳ ನಂತರ ಆತ ಕೆಲಸಕ್ಕೆ ಬಾರದೇ ಇರುವುದನ್ನು ಕಂಡು ಅತನೇ ಚಿನ್ನದ ಉಂಗುರವನ್ನು ಕಳವು ಮಾಡಿರಬಹುದು ಎಂದು ಆತನ ಮೇಲೆ ಮನೆಯವರಿಗೆ ಸಂಶಯ ಹುಟ್ಟಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯನ್ನು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Also Read  ಚಾಕೊಲೇಟ್‌ನಲ್ಲಿ ಗಾಂಜಾ ಪತ್ತೆ - ಆರೋಪಿಗಳಿಬ್ಬರಿಗೆ ನ್ಯಾಯಾಂಗ ಬಂಧನ

error: Content is protected !!
Scroll to Top