ಲಾರಿ & ಆಪೆರಿಕ್ಷಾ ನಡುವೆ ಢಿಕ್ಕಿ ➤ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಹಾನಿ

(ನ್ಯೂಸ್ ಕಡಬ) newskadaba.com ವಿಟ್ಲ, ನ. 03. ಲಾರಿ ಮತ್ತು ಆಪೆ ರಿಕ್ಷಾ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಆಪೆ ರಿಕ್ಷಾ ಪಲ್ಟಿಯಾದ ಘಟನೆ ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಮಾಣಿಯಲ್ಲಿ ನಡೆದಿದೆ.

ಪುತ್ತೂರು ಕಡೆಯಿಂದ ಕೋಳಿಗಳ ಆಹಾರ ಸರಬರಾಜು ಮಾಡುತ್ತಿದ್ದ ಈಚರ್ ಲಾರಿಯು ಎದುರಿನಿಂದ ಹೋಗುತ್ತಿದ್ದ ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಮುಂಭಾಗದಲ್ಲಿ ತೆರಳುತ್ತಿದ್ದ ಆಪೆ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಪೆ ರಿಕ್ಷಾ ರಸ್ತೆ ಬದಿಗೆ ಉರುಳಿ ಬಿದ್ದಿದ್ದು, ಚಾಲಕ ಗಾಯಗೊಂಡಿದ್ದಾನೆ. ಆಪೆ ರಿಕ್ಷಾದಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳಿದ್ದು, ಸಂಪೂರ್ಣ ನಾಶವಾಗಿದೆ ಎಂದು ಪ್ರತ್ಯಕ್ಷಿದರ್ಶಿಗಳು ತಿಳಿಸಿದ್ದಾರೆ.

Also Read  ದ.ಕ. ಜಿಲ್ಲೆಯಲ್ಲಿ ಚಾರಣಕ್ಕೆ ವಿಧಿಸಿದ್ದ ನಿಷೇಧ ವಾಪಸ್ - ಡಿಸಿ ಮುಲ್ಲೈ ಮುಹಿಲನ್

error: Content is protected !!