ಬೈಕ್ ನಲ್ಲಿ ಅಕ್ರಮ ಮದ್ಯ ಸಾಗಾಟ ➤ ಆರೋಪಿ ಅಂದರ್

(ನ್ಯೂಸ್ ಕಡಬ) newskadaba.com ಮಂಜೇಶ್ವರ, ನ. 03. ಬೈಕ್ ನಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ವೇಳೆ ಅಬಕಾರಿದಳ ಅಧಿಕಾರಿಗಳು ವಶಪಡಿಸಿಕೊಂಡು, ಓರ್ವನನ್ನು ಬಂಧಿಸಿದ ಘಟನೆ ಕುಬಣೂರು ಒಡ್ಡಂಬೆಟ್ಟು ಎಂಬಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಅಡೂರಿನ ಪ್ರಶಾಂತ್(24) ಎಂದು ಗುರುತಿಸಲಾಗಿದೆ. ಅಬಕಾರಿ ಸಿಬ್ಬಂದಿಗಳು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬಂದ ಬೈಕ್ ಒಂದನ್ನು ತಡೆದು ತಪಾಸಣೆ ನಡೆಸಿದಾಗ ಮದ್ಯ ಮತ್ತು ಬಿಯರ್ ಪತ್ತೆಯಾಗಿದೆ. ಈ ಪ್ರದೇಶಕ್ಕೆ ಅಕ್ರಮ ಮದ್ಯ ಸಾಗಾಟ ಮಾಡುತ್ತಿರುವ ಬಗ್ಗೆ ಅಬಕಾರಿ ದಳಕ್ಕೆ ಲಭಿಸಿದ ಖಚಿತ ಮಾಹಿತಿಯಂತೆ ಈ ಕಾರ್ಯಾಚರಣೆಯನ್ನು ನಡೆಸಿದ್ದಾರೆ.

Also Read  ಕೊಡಗಿನ ಹೆಮ್ಮೆಯ ನಿವೃತ್ತ ಲೆ. ಜನರಲ್ ಸಿ ಎನ್ ಸೋಮಣ್ಣ ನಿಧನ

error: Content is protected !!
Scroll to Top