ಇಚಿಲಂಪಾಡಿ: ಕಾಡಾನೆ ಪ್ರತ್ಯಕ್ಷ ➤ ಹೆದರಿ ಆನೆ ಸಮೀಪವೇ ಬೈಕ್ ಬಿದ್ದು ಜೀವಭಯದಿಂದ ಓಡಿದ ಯುವಕರು…!

(ನ್ಯೂಸ್ ಕಡಬ) newskadaba.com ಪೆರಿಯಶಾಂತಿ, ನ. 03. ರಸ್ತೆ ಬದಿಯಲ್ಲಿ ಕಾಡಾನೆಯೊಂದು ಏಕಾಏಕಿ ಪ್ರತ್ಯಕ್ಷಗೊಂಡಿದ್ದು, ಬೈಕ್ ಸವಾರರಿಬ್ಬರು ಪಾರಾದ ಘಟನೆ ಇಚಿಲಂಪಾಡಿ ಎಂಬಲ್ಲಿ ನಡೆದಿದೆ.


ಕುಟ್ರುಪ್ಪಾಡಿ ಗ್ರಾಮದ ಬಜೆತ್ತಡ್ಕ ನಿವಾಸಿ ಧರ್ಮಪಾಲ ಹಾಗೂ ರಮೇಶ್ ಎಂಬವರು ಕೊಕ್ಕಡದ ಸಂಬಂಧಿಕರ ಮನೆಗೆಂದು ಇಚಿಲಂಪಾಡಿ ಮೂಲಕ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ರಸ್ತೆ ದಾಟಿದ್ದು, ದಿಕ್ಕು ತೋಚದ ಬೈಕ್ ಸವಾರ ಹಠಾತ್ ಬ್ರೇಕ್ ಹಾಕಿದ ಕಾರಣ ಕಾಡಾನೆಯ ಪಕ್ಕವೇ ಬೈಕ್ ಮಗುಚಿ ಬಿದ್ದು ಸವಾರ ಮತ್ತು ಸಹ ಸವಾರ ರಸ್ತೆ ಬದಿಗೆ ಎಸೆಯಲ್ಪಟ್ಟಿದ್ದು, ಬಳಿಕ ಕೂಡಲೇ ಎದ್ದು ಬೈಕ್ ಬಿಟ್ಟು ಅರ್ಧ ಕಿ.ಮೀ ದೂರ ಓಡಿ ಹೋಗಿದ್ದಾರೆ ಎನ್ನಲಾಗಿದೆ. ಬೈಕ್ ಕಂಡು ಅಲ್ಲಿ ಜನ ನೆರೆದಿದ್ದು, ಬೈಕನ್ನು ಎತ್ತಿ ಸಹಕರಿಸಿದ್ದಾರೆ. ಘಟನೆಯಲ್ಲಿ ಓರ್ವ ಸವಾರನ ಕಾಲಿಗೆ ಸಣ್ಣ ಗಾಯವಾಗಿದ್ದು, ಸಹ ಸವಾರನ ಕೈಗೆ ಪರಚಿದ ಗಾಯವಾಗಿದೆ ಎಂದು ತಿಳಿದುಬಂದಿದೆ.

Also Read  ಬೆಳ್ಳಾರೆ: ಎರಡಂತಸ್ತಿನ ಕಟ್ಟಡದಿಂದ ಆಯತಪ್ಪಿ ಕೆಳಕ್ಕೆ ಬಿದ್ದ ಗುತ್ತಿಗೆದಾರ ➤ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತ್ಯು

error: Content is protected !!
Scroll to Top