ನೆಲ್ಯಾಡಿ: ಪದೇ ಪದೇ ಅನ್ಯಕೋಮಿನ ಯುವತಿಯ ಅತ್ಯಾಚಾರ ➤ ಆರೋಪಿ ಬಂಧನ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ. 03. ಅನ್ಯಕೋಮಿನ ಬಾಲಕಿಯನ್ನು ಪದೇ ಪದೇ ಬಲಾತ್ಕಾರವಾಗಿ ಅತ್ಯಾಚಾರ ಮಾಡಿರುವ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದಕ್ಕೆ ಸಂಬಂಧಿಸಿ ನೆಲ್ಯಾಡಿಯ ಹೊಸಮಜಲು ನಿವಾಸಿ ರಿಕ್ಷಾ ಚಾಲಕ ನೌಫಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯು ನೆಲ್ಯಾಡಿಯ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಣ ಪಡೆಯುತ್ತಿದ್ದ ವೇಳೆ ಆಕೆಯ ಪರಿಚಯ ಮಾಡಿಕೊಂಡ ಯುವಕ ಆಕೆಯ ಮೊಬೈಲ್ ನಂಬರನ್ನು ಪಡೆದುಕೊಂಡಿದ್ದ. ಆ ಬಳಿಕ ಇಬ್ಬರ ನಡುವೆ ಸಲುಗೆ ಬೆಳೆದು ಯುವಕ ಬಾಲಕಿಯ ಮನೆಗೆ ಪದೇ-ಪದೇ ತೆರಳಿ ಲೈಂಗಿಕ ಅತ್ಯಾಚಾರ ನಡೆಸಿ ವಾಪಾಸ್ಸಾಗುತ್ತಿದ್ದ. ಇದೇ ರೀತಿ ಎರಡು ದಿನಗಳ ಹಿಂದೆ ಕೂಡಾ ಸೆಕ್ಸ್ ಗೆ ಸಹಕರಿಸುವಂತೆ ಯುವಕ ಒತ್ತಾಯಿಸಿದ ಹಿನ್ನೆಲೆ ಆಕೆ ಈ ವಿಚಾರವನ್ನು ಪೋಷಕರಿಗೆ ತಿಳಿಸಿದ್ದು, ಇದರಂತೆ ಯುವತಿಯ ತಂದೆ ಬೆಳ್ತಂಗಡಿ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.

Also Read  ನಿಗೂಢ ಕಾಯಿಲೆಗೆ ಒಂದೇ ತಿಂಗಳಲ್ಲಿ 17 ಮಕ್ಕಳು ಬಲಿ..!

error: Content is protected !!
Scroll to Top