ಮಂಗಳೂರು: 2021-22ರ ಕಂಬಳದ ಅಂತಿಮ ವೇಳಾಪಟ್ಟಿ ಪ್ರಕಟ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 02. ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯು 2021-22ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ನಡೆಯುವ 19 ಕಂಬಳದ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳ ಈ ಬಾರಿ ನವೆಂಬರ್ 27ರಿಂದ ಮಾರ್ಚ್ 26ರವರೆಗೆ ನಡೆಯಲಿದ್ದು, ಒಟ್ಟು 19 ಕಂಬಳಗಳು ಜಿಲ್ಲಾ ಕಂಬಳ ಸಮಿತಿ ಅಡಿಯಲ್ಲಿ ನಡೆಯಲಿದೆ.

ಕಂಬಳದ ಅಂತಿಮ ವೇಳಾಪಟ್ಟಿ ಕೆಳಗಿನಂತಿವೆ:- ನವೆಂಬರ್ 27 ಶನಿವಾರ ಮೂಡಬಿದಿರೆ, ಡಿಸೆಂಬರ್ 5 ಭಾನುವಾರ ಹೊಕ್ಕಾಡಿಗೋಳಿ, ಡಿಸೆಂಬರ್ 11 ಶನಿವಾರ ಸುರತ್ಕಲ್, ಡಿಸೆಂಬರ್ 18 ಶನಿವಾರ ಮಿಯ್ಯಾರು, ಡಿಸೆಂಬರ್ 19 ಭಾನುವಾರ ಬಳ್ಳಮಂಜ, ಡಿಸೆಂಬರ್ 26 ಭಾನುವಾರ ಮೂಲ್ಕಿ ಅರಸು ಕಂಬಳ, ಜ. 01 ಕಕ್ಯಪದವು, ಜ. 08 ಅಡ್ವೆ ನಂದಿಕೂರು, ಜ.15 ಪುತ್ತೂರು, ಜ. 22 ಶನಿವಾರ ಮಂಗಳೂರು, ಜ. 29 ಶನಿವಾರ ಐಕಳ ಬಾವ, ಫೆ. 05 ಶನಿವಾರ ಬಾರಾಡಿ ಬೀಡು, ಫೆ.13 ಜಪ್ಪಿನಮೊಗರು, ಫೆ. 19. ವಾಮಂಜೂರು, ಫೆ. 26 ಪೈವಳಿಕೆ ಮಾ.05 ವೇಣೂರು, ಮಾ. 12 ಉಪ್ಪಿನಂಗಡಿ, ಮಾ. 19 ಕಟಪಾಡಿ
ಮಾ.26ರಂದು ಬಂಗಾಡಿಯಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.

Also Read  ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗುಮಾಸ್ತ..!➤ದೂರು ದಾಖಲು 

error: Content is protected !!
Scroll to Top