ಪುನೀತ್ ರಾಜ್ ಕುಮಾರ್ ಗೆ ಅವಮಾನ ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) Newskadaba.com ಬೆಂಗಳೂರು, ನ. 02. ಪ್ರತಿಭಾನ್ವಿತ ನಟ ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ನಾಲ್ಕು ದಿನಗಳಾಗಿದ್ದರೂ, ಅವರು ನಮ್ಮ ಜೊತೆಗೆ ಇಲ್ಲ ಎಂಬುದನ್ನು ನಂಬುವುದೂ ಕೂಡ ಅಸಾಧ್ಯವೆನಿಸುತ್ತಿರುವ ಈ ಸಂದರ್ಭದಲ್ಲಿ ಕಿಡಿಗೇಡಿಯೋರ್ವ ಅಪ್ಪು ಕುರಿತು ಸೋಶಿಯಲ್​ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್​ ಮಾಡಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ರಿತ್ವಿಕ್ ಎಂದು ಗುರುತಿಸಲಾಗಿದೆ. ಡಾ. ರಾಜ್ ಕುಮಾರ್ ಮೃತಪಟ್ಟ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಗಳು ಮತ್ತೆ ನಡೆಯಬಾರದು, ಅಭಿಮಾನಿಗಳು ಮದ್ಯ ಸೇವಿಸಿ ಅಚಾತುರ್ಯಗಳನ್ನು ಮಾಡಬಹುದೆಂಬ ಮುನ್ನೆಚ್ಚರಿಕೆಯಿಂದ ಪುನೀತ್‌ ನಿಧನರಾದ ದಿನದಿಂದ ಅಂತ್ಯ ಸಂಸ್ಕಾರದ ದಿನದವರೆಗೆ ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧಿದಲಸಲಾಗಿತ್ತು ಮಾಡಲಾಗಿತ್ತು. ಇದನ್ನ ವಿರೋಧಿಸಿದ್ದ ರಿತ್ವಿಕ್, ಹೇಗೋ ಮದ್ಯ ಪಡೆದುಕೊಂಡು, ತನಗೆ ಮದ್ಯ ಸಿಕ್ಕಿರುವುದಾಗಿ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಲ್ಲದೇ, “ರಾಜ್​ಕುಮಾರ್​​ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಆತನನ್ನು ನೆನಪಿಟ್ಟುಕೊಳ್ಳಿ. ಮರೆಯಬೇಡಿ. ಯಾಕೆಂದರೆ, ಇದನ್ನು ಕುಡಿದ ಬಳಿಕ ಅವನ ಸಮಾಧಿ ಮೇಲೆ ನಾವು ಮೂ** ಮಾಡುತ್ತೇವೆ” ಎಂದು ಬರೆದು ಅವಮಾನ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ಅಭಿಮಾನಿಗಳು ಆತನ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದರು. ಬಳಿಕ ಬೆಂಗಳೂರು ಸೈಬರ್ ಪೊಲೀಸರು ಆತನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್ ಮಾಹಿತಿ ನೀಡಿದ್ದಾರೆ.

Also Read  ಕರ್ನಾಟಕ ಕಾನೂನು ಪ್ರಾಧಿಕಾರ ಸ್ಥಾಪಿಸಿ ➤ ರಾಜ್ಯ ಸರ್ಕಾರಕ್ಕೆ ಕಾನೂನು ತಜ್ಞರ ಆಗ್ರಹ

error: Content is protected !!
Scroll to Top