ಎಸ್ ವೈಎಸ್ ಕಡಬ ಸೆಂಟರ್ ಪುನರ್ ರಚನೆ ➤ ಅಧ್ಯಕ್ಷರಾಗಿ ಉಮರ್ ಮುಸ್ಲಿಯಾರ್ ಮರ್ಧಾಳ, ಕಾರ್ಯದರ್ಶಿಯಾಗಿ ಬಶೀರ್ ಚೆನ್ನಾರ್ ಪುನರಾಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ನ. 02. ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ(ರಿ.) ಎಸ್‌ವೈಎಸ್ ಕಡಬ ಸೆಂಟರ್‌ ಇದರ ಪುನರ್ ರಚನಾ ಸಭೆಯು ಸೋಮವಾರದಂದು ಕೇಂದ್ರ ಜುಮಾ ಮಸೀದಿಯಲ್ಲಿ ನಡೆಯಿತು. ಸಯ್ಯಿದ್ ಸಾದಾತ್ ತಂಙಳ್ ಕರ್ವೇಲು ದುಆ ನೆರೆವೇರಿಸುವ ಮೂಲಕ ಸಭೆಗೆ ಚಾಲನೆ ನೀಡಿದರು.

ಸೆಂಟರ್ ಅಧ್ಯಕ್ಷರಾದ ಉಮರ್ ಮುಸ್ಲಿಯಾರ್ ಮರ್ಧಾಳ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾದ್ಯಕ್ಷರಾದ ಅಬೂಬಕ್ಕರ್ ಸಅದಿ ಮಜೂರ್ ಉದ್ಘಾಟಿಸಿದರು. ಸೆಂಟರ್ ಪ್ರಧಾನ ಕಾರ್ಯದರ್ಶಿ ಬಶೀರ್ ಚೆನ್ನಾರ್ ರವರು ವರದಿ ವಾಚಿಸಿದರು. ಕೋಶಾಧಿಕಾರಿ ಅಬ್ದುಲ್ ಖಾದರ್ ಮಾಸ್ಟರ್ ಲೆಕ್ಕಪತ್ರ ಮಂಡಿಸಿದರು. ಸಭೆಯಲ್ಲಿ ವರದಿ ಮತ್ತು ಲೆಕ್ಕಪತ್ರವನ್ನು ಸರ್ವಾನುಮತದಿಂದ ಅನುಮೋದಿಸಲಾಯಿತು. ಕಾರ್ಯದರ್ಶಿ ಬಶೀರ್ ಚೆನ್ನಾರ್ ಮಾತನಾಡಿ ‘ಸಂಘಟನೆಗೆ ನಾವು ಬೇಕಾಗಿಲ್ಲ, ನಮಗೆ ಸಂಘಟನೆ ಬೇಕಾಗಿದೆ, ನಮ್ಮ ಪೂರ್ವಿಕ ಮಹಾನುಭಾವರು ಹಾಕಿಕೊಟ್ಟ ಪಾದದಲ್ಲಿ ಮುನ್ನಡೆದು, ಭಯಭಕ್ತಿಯಿಂದ ಸಂಘಟನೆಯಲ್ಲಿ ಕಾರ್ಯಾಚರಿಸಿ ಇಹಪರ ವಿಜಯಿಗಳ ಸಾಲಿನಲ್ಲಿ ಸೇರುವ. ಅಲ್ಲಾಹನು ಅನುಗ್ರಹಿಸಲಿ ಎಂದರು’.

Also Read  ಬಿಜೆಪಿ ಚುನಾಯಿತ ಸದಸ್ಯರ ಹಾಗೂ ಪಕ್ಷದ ಕಾರ್ಯಕರ್ತರ ಅಭ್ಯಾಸ ವರ್ಗ


ಜಿಲ್ಲೆಯಿಂದ ಆಗಮಿಸಿದ ಸಭೆಯ ವೀಕ್ಷಕರಾದ ಸೆಂಟರ್ ಉಸ್ತುವಾರಿ ಸಾದಾತ್ ತಂಙಳ್ ಕರ್ವೇಲ್ ರವರು 2021-23ರ ಸಾಲಿನ ನೂತನ ಸಮಿತಿಯನ್ನು ರಚಿಸಿದರು. ಅದರಂತೆ ಅಧ್ಯಕ್ಷರಾಗಿ ಉಮರ್ ಮುಸ್ಲಿಯಾರ್ ಮರ್ದಾಳ, ಪ್ರಧಾನ ಕಾರ್ಯದರ್ಶಿಯಾಗಿ ಬಶೀರ್ ಮುಸ್ಲಿಯಾರ್ ಚೆನ್ನಾರ್, ಕೋಶಾಧಿಕಾರಿಯಾಗಿ ಅಬ್ದುಲ್ ಖಾದರ್ ಮಾಸ್ಟರ್, ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಹಾಜಿ ಸುಂಕದಕಟ್ಟೆ, ದ‌ಅ್‌ವಾ ಕಾರ್ಯದರ್ಶಿಯಾಗಿ ನಾಸಿರ್ ಸಅದಿ ಪನ್ಯ, ಸಂಘಟನಾ ಕಾರ್ಯದರ್ಶಿಯಾಗಿ ರಝಾಕ್ ಬಾಖವಿ ಮರ್ದಾಳ, ಸಾಮಾಜಿಕ ಕಾರ್ಯದರ್ಶಿಯಾಗಿ ಸೆಯ್ಯದ್ ಬಶೀರ್ ಕಲ್ಲುಗುಡ್ಡೆ, ಇಸಾಬಾ ಕಾರ್ಯದರ್ಶಿಯಾಗಿ ಹಕೀಂ ಮದನಿ ಕಡಬ ಸದಸ್ಯರಾಗಿ ಶುಕೂರ್ ಅಡ್ಡಗದ್ದೆ, ಅಬುಬಕ್ಕರ್ ಪಾಲಪ್ಪೆ, ಆದಂ ಕುಂಡೋಳಿ, T.K.ಮದನಿ, ಅಬ್ದುಲ್ಲ ಕುಂಞಿ ಪಾಲತ್ತಡ್ಕ, ಇಬ್ರಾಹಿಂ ಸಖಾಪಿ ನೆಟ್ಟಣ, ಹನೀಫ್ ಬಸವಪಾಲ್, P.K ಉಸ್ತಾದ್, ಸಯ್ಯದ್ ಶರೀಫ್ ಕೇಪು, ಮಜೀದ್ ಕಲ್ಲಾಜೆ, ರಪೀಕ್ ಅಲೆಕ್ಕಾಡಿ, ಹಸನಬ್ಬ FH, ಜಿಲ್ಲಾ ಕೌನ್ಸಿಲರಾಗಿ ಇಬ್ರಾಹಿಂ ಸಖಾಫಿ ನೆಟ್ಟಣ, ನಾಸಿರ್ ಸಅದಿ ಪನ್ಯ, ಹಕೀಂ ಮದನಿ ಕಡಬ, ಆದಂ ಕುಂಡೋಳಿ, ಹನೀಫ್ ಸಖಾಪಿ ಕುಂಡೋಳಿ ರವರು ಆಯ್ಕೆಯಾದರು. ನೂತನ ಪ್ರಧಾನ ಕಾರ್ಯದರ್ಶಿ ಬಶೀರ್ ಚೆನ್ನಾರ್ ಸ್ವಾಗತಿಸಿ ಮೂರು ಸ್ವಲಾತ್ ನೊಂದಿಗೆ ಸಭೆಯನ್ನು ಕೊನೆಗೊಳಿಸಲಾಯಿತು.

Also Read  ರಸ್ತೆ ಅಪಘಾತ: ತಂದೆ,3 ಮಕ್ಕಳು ಮೃತ್ಯು.!


error: Content is protected !!
Scroll to Top