(ನ್ಯೂಸ್ ಕಡಬ) Newskadaba.com ದಾವಣಗೆರೆ, ನ. 01. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ಸಭೆಯು ಅಕ್ಟೋಬರ್ 30 ಮತ್ತು 31 ರಂದು ರಾಜ್ಯಾಧ್ಯಕ್ಷರಾದ ಅಥಾವುಲ್ಲ ಪುಂಜಾಲಕಟ್ಟೆಯವರ ಅಧ್ಯಕ್ಷತೆಯಲ್ಲಿ ದಾವಣಗೆರೆಯಲ್ಲಿ ನಡೆಯಿತು. ರಾಜ್ಯ ಸಮಿತಿ ಸದಸ್ಯರು, ರಾಜ್ಯದ ಎಲ್ಲ ಜಿಲ್ಲಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಪ್ರಸಕ್ತ ಸನ್ನಿವೇಶದ ಬಗ್ಗೆ, ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಹಾಗೂ ಮುಂದಿನ ಚಟುವಟಿಕೆಯ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯ ನಿರ್ಣಯಗಳು :-
1)ಖಾಸಗಿ ಶಾಲಾ ಕಾಲೇಜುಗಳಿಗೆ ಸರಕಾರ ಶುಲ್ಕದ ಮೊತ್ತ ನಿಗದಿಪಡಿಸಲಿ
2) ಪ್ರವಾದಿಯನ್ನು ಅವಹೇಳಿಸಲಾದ ಬಿಎಡ್ ಪಠ್ಯಪುಸ್ತಕವನ್ನು ಸಂಪೂರ್ಣವಾಗಿ ರದ್ದುಗೊಳಿಸಲಿ
3)ಕರ್ನಾಟಕ ರಾಜ್ಯೋತ್ಸವ ದಿನವನ್ನು ಕನ್ನಡ ವಿರೋಧಿ ಎನ್ಇಪಿಯನ್ನು ತಿರಸ್ಕರಿಸುವ ದಿನವಾಗಿ ಆಚರಣೆಗೆ ಕರೆ
4) ರಾಜ್ಯಾದ್ಯಂತ ನಡೆಯುತ್ತಿರುವ ಅನೈತಿಕ ಪೋಲಿಸ್ ಗಿರಿಗೆ ಕಡಿವಾಣ ಹಾಕಲು ಪ್ರತಿರೋಧ ಅನಿವಾರ್ಯ
5)ಎನ್ಇಪಿ ವಿರುದ್ದ ರಾಜಿರಹಿತ ಹೋರಾಟಕ್ಕೆ ತೀರ್ಮಾನ