ಮನೆಯಲ್ಲಿ ಯಾವಾಗಲೂ ಸುಖ-ಶಾಂತಿ ಅಭಿವೃದ್ಧಿ ನಡೆಸಲು ಈ ನಿಯಮವನ್ನು ಅನುಸರಿಸಿ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ವಾಸ್ತುಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಕೆಲವೊಂದು ಪವಿತ್ರವಾದ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಹಾಗೂ ಮನೆಯ ವಿಷಯದಲ್ಲಿ ಕೆಲವು ನಿಯಮಗಳನ್ನು ಪಾಲಿಸುವುದರಿಂದ ಮನೆಗೆ ಯಾವುದೇ ರೀತಿಯ ಋಣಾತ್ಮಕ ಸಮಸ್ಯೆಗಳು ಎದುರಾಗುವುದಿಲ್ಲ, ಇದು ಮನೆಯ ಸಮೃದ್ಧಿಗೆ ನೆರವಾಗುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಮನೆಗೆ ಸಂಬಂಧಿಸಿದ ಹಾಗೆ ಯಾವ ರೀತಿಯ ಅನುಕೂಲಕರವಾದ ನಿಯಮಗಳನ್ನು ಅನುಸರಿಸಬೇಕು ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಮೊದಲನೆಯದಾಗಿ ಮನೆಯ ಮುಂಭಾಗ ತಪ್ಪದೇ ನೇಮ್ ಪ್ಲೇಟ್ ಅನ್ನು ಹಾಕಬೇಕು, ಈ ರೀತಿ ನೇಮ್ ಪ್ಲೇಟ್ ಅನ್ನು ಹಾಕುವುದರಿಂದ ಮನೆಗೆ ಬರುವಂತವರು ಇದನ್ನು ನೋಡಿಕೊಂಡು ಮನೆಗೆ ಬರುವಾಗ ಅವರ ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆ ಇರುತ್ತದೆ, ಇದರಿಂದ ಮನೆಯಲ್ಲಿ ಸಂತೋಷ ಎನ್ನುವುದು ಹೆಚ್ಚಾಗುತ್ತದೆ. ಇನ್ನು ಮನೆಯಲ್ಲಿ ಅವಶ್ಯಕವಾಗಿ ಗಂಗಾಜಲವನ್ನು ಇಡುವುದು ಬಹಳ ಒಳ್ಳೆಯದು, ಆದರೆ ಇದನ್ನು ಯಾವುದೇ ಕಾರಣಕ್ಕೂ ಕತ್ತಲಿನಲ್ಲಿ ಇಡಬಾರದು, ಇದರಲ್ಲಿ ಸಕಾರಾತ್ಮಕ ಶಕ್ತಿಯು ಹೆಚ್ಚಾಗಿ ಇರುವುದರಿಂದ ಇದನ್ನು ಒಂದೇ ಸ್ಥಳದಲ್ಲಿ ಇಡುವ ಬದಲು ಆಗಾಗ ಬೇರೆ ಬೇರೆ ಕೋಣೆಗಳಲ್ಲಿ ಇಡುವುದರಿಂದ ಮನೆಯ ತುಂಬಾ ಸಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ, ಇದನ್ನು ಆದಷ್ಟು ಬೆಳಕು ಇರುವಂತಹ ಸ್ಥಳದಲ್ಲಿ ಇಡಬೇಕು. ಇನ್ನು ಮನೆಯ ಮುಂಭಾಗ ಸಂಜೆ ಹಾಗೂ ಬೆಳಗಿನ ಸಮಯದಲ್ಲಿ ಅನಾವಶ್ಯಕವಾಗಿ ಬಲ್ಬ್ ಗಳನ್ನು ಉರಿಸಬಾರದು, ಹೀಗೆ ಉರಿಸುವುದರಿಂದ ನಕಾರಾತ್ಮಕ ಶಕ್ತಿಗಳ ಪ್ರವೇಶ ಆಗುತ್ತದೆ ಎಂದು ಹೇಳಲಾಗುತ್ತದೆ. ಇನ್ನು ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿ ಕನ್ನಡಿಯನ್ನು ಬಿಡಬಾರದು ಎಂದು ಹೇಳಲಾಗುತ್ತದೆ, ಇದು ಆರೋಗ್ಯದ ಸಮಸ್ಯೆಗೆ ಕಾರಣವಾಗುತ್ತದೆ ಹಾಗೂ ನಕರಾತ್ಮಕತೆಯನ್ನು ಸೃಷ್ಟಿಸುತ್ತದೆ ಎಂದು ಹೇಳಲಾಗುತ್ತದೆ, ಒಂದು ವೇಳೆ ಮಲಗುವ ಕೋಣೆಯಲ್ಲಿ ಕನ್ನಡಿಯ ಅವಶ್ಯಕತೆ ಇದ್ದರೆ ಕನ್ನಡಿಯನ್ನು ಇಡಬೇಕಾದರೆ ನೀವು ಮಲಗುವಾಗ ನಿಮ್ಮ ಪ್ರತಿಬಿಂಬ ಕನ್ನಡಿಯಲ್ಲಿ ಕಾಣಿಸದ ರೀತಿಯಲ್ಲಿ ಇಡಬೇಕು. ಇನ್ನು ಮನೆಯ ಒಳಗಡೆ ಪೂರ್ವ ಹಾಗೂ ಪಶ್ಚಿಮದ ದಿಕ್ಕಿನಿಂದ ಸೂರ್ಯನ ಬೆಳಕು ಹೆಚ್ಚಾಗಿ ಮನೆಯ ಒಳಗಡೆ ಪ್ರವೇಶಿಸುವಂತೆ ವ್ಯವಸ್ಥೆ ಮಾಡುವುದು ಒಳ್ಳೆಯದು,ಈ ರೀತಿ ಮಾಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ. ಈ ರೀತಿಯಾಗಿ ಮನೆ ಎಂಬುವುದು ಪ್ರತಿಯೊಬ್ಬರ ಕನಸು ಆಗಿರುತ್ತದೆ, ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರುವುದು ನೆಲೆಸಿದಾಗ ಮನೆಯ ಸದಸ್ಯರು ಕೂಡ ನೆಮ್ಮದಿಯಿಂದ ಇರುತ್ತಾರೆ, ಹಾಗಾಗಿ ಮನೆಯಲ್ಲಿ ಧನಾತ್ಮಕ ಶಕ್ತಿಗಳು ಹೆಚ್ಚಾಗಿ ಸುಖ ಸಂತೋಷ ಸಮೃದ್ಧಿ ಆಗಬೇಕು ಯಾವುದೇ ರೀತಿಯ ಋಣಾತ್ಮಕ ಶಕ್ತಿಗಳು ಮನೆಯ ಒಳಗೆ ಬರಬಾರದು ಎಂದರೆ ತಪ್ಪದೇ ವಾಸ್ತುಶಾಸ್ತ್ರದಲ್ಲಿ ತಿಳಿಸಿರುವ ಈ ಸಣ್ಣ ನಿಯಮಗಳನ್ನು ಅನುಸರಿಸಿಕೊಳ್ಳಿ.

Also Read  ಅರಣ್ಯ ಕೃಷಿ ಪದ್ಧತಿ ಸಂವಾದದಲ್ಲಿ ಭಾಗಿ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top