ಮಂಗಳೂರು: ಎರಡು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ➤ ಬಳಿಕ ಉಪ್ಪುನೀರಿಗೆ ಎಸೆದ ನೀಚ

(ನ್ಯೂಸ್ ಕಡಬ) Newskadaba.com ಮಂಗಳೂರು, ನ. 01. ವ್ಯಕ್ತಿಯೋರ್ವ ಎರಡು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ನೀಚಕೃತ್ಯ ಮಂಗಳೂರಿನ ಹೊಯಿಗೆ ಬಜಾರ್ ನಲ್ಲಿರುವ ಫಿಶ್ ಕಟ್ಟಿಂಗ್ ಯಾರ್ಡ್ ನಲ್ಲಿ ನಡೆದಿದೆ.

ಆರೋಪಿ ಬಿಹಾರ ಮೂಲದ ಚಂದನ್(38) ಎಂದು ಗುರುತಿಸಲಾಗಿದೆ. ಹೊಯಿಗೆ ಬಜಾರ್ ನ ಫಿಶ್ ಕಟ್ಟಿಂಗ್ ಯಾರ್ಡ್ ನಲ್ಲಿ ಬಿಹಾರ ಮೂಲದ ಸುಮಾರು 30ರಿಂದ 70 ಮಂದಿ ವಾಸವಿದ್ದು, ಇವರೆಲ್ಲ ಕೆಲಸಕ್ಕೆ ಹೋಗುವ ವೇಳೆ ಮಕ್ಕಳೆಲ್ಲ ಒಂದೆಡೆ ಒಟ್ಟಿಗೆ ಇರುತ್ತಾರೆ. ಈ ಮಗುವಿನ ತಂದೆ ತಾಯಿ ಫ್ಯಾನ್ ಖರೀದಿಗೆಂದು ಹೋಗಿದ್ದ ಸಂದರ್ಭ ಆರೋಪಿ ಮಗುವನ್ನು ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿದ್ದಲ್ಲದೇ ಮಗುವನ್ನು ಉಪ್ಪು ನೀರು ಶೇಖರಣೆ ಮಾಡುವ ಟ್ಯಾಂಕ್ ಗೆ ಬಿಸಾಡಿದ್ದಾನೆ ಎನ್ನಲಾಗಿದೆ. ಮಾರುಕಟ್ಟೆಯಿಂದ ಮರಳಿದ ತಂದೆ ತಾಯಿಗೆ ಮಗು ನಾಪತ್ತೆಯಾಗಿರುವುದು ತಿಳಿದು ಎಲ್ಲಾ ಕಡೆ ಹುಡುಕಾಡಿದಾಗ ಟ್ಯಾಂಕ್ ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಳಿಕ ಮಗುವನ್ನು ಆಸ್ಪತ್ರೆಗೆ ದಾಖಲಿಸಿದಾಗ ಮಗುವಿನ ಮೇಲೆ ದೌರ್ಜನ್ಯ ನಡೆದಿರುವುದು ತಿಳಿದುಬಂದಿದೆ.

Also Read  ಇಲೆಕ್ಟ್ರಿಕ್ ಶೋರೂಂ ನಲ್ಲಿ ಅಗ್ನಿ ಅವಘಡ- ಲಕ್ಷಾಂತರ ರೂ ನಷ್ಟ ➤ ಶಾರ್ಟ್ ಸರ್ಕ್ಯೂಟ್ ಶಂಕೆ..!

error: Content is protected !!
Scroll to Top