ವಿಟ್ಲ: ಪದವಿ ಕಾಲೇಜು ವಿದ್ಯಾರ್ಥಿನಿ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ) Newskadaba.com ಪೆರ್ಲ, ಅ. 30. ಕಾಲೇಜು ವಿದ್ಯಾರ್ಥಿನಿಯೋರ್ವಳ ಮೃತದೇಹವು ನೇಣುಬಿಗಿದ ಸ್ಥಿತಿಯಲ್ಲಿ ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ಪತ್ತೆಯಾಗಿದೆ.

ಮೃತ ಯುವತಿಯನ್ನು ಪೆರ್ಲ ಸಮೀಪದ ಬಜಕೂಡ್ಲು ನಿವಾಸಿ ಮಹಾಲಿಂಗ ನಾಯ್ಕರವರ ಪುತ್ರಿ ಶ್ರಾವ್ಯ (20) ಎಂದು ಗುರುತಿಸಲಾಗಿದೆ. ವಿಟ್ಲದ ಪದವಿ ಕಾಲೇಜಿನ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಈಕೆ, ಅ. 29ರಂದು ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮಧ್ಯಾಹ್ನದ ವೇಳೆ ತಂದೆ-ತಾಯಿ ತೋಟದ ಕೆಲಸ ಮುಗಿಸಿ ವಾಪಸ್ಸು ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಈ ಕುರಿತು ಬದಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Also Read  ಡೆಂಗ್ಯೂ ಜ್ವರಕ್ಕೆ ಓರ್ವ ಬಲಿ

error: Content is protected !!
Scroll to Top