ತ್ರಿಪುರಾದಲ್ಲಿ ಮುಸ್ಲಿಮರ ಮೇಲಿನ ಸರಕಾರಿ ಪ್ರೇರಿತ ದಾಳಿ ಖಂಡನೀಯ ➤ ಬೆಳ್ತಂಗಡಿಯಲ್ಲಿ ಪಿಎಫ್ಐ ಪ್ರತಿಭಟನೆ

(ನ್ಯೂಸ್ ಕಡಬ) Newskadaba.com ಬೆಳ್ತಂಗಡಿ, ಅ. 30. ತ್ರಿಪುರಾದಲ್ಲಿ ಮುಸ್ಲಿಮರ ಮೇಲಿನ ಸರಕಾರಿ ಪ್ರೇರಿತ ಮತ್ತು ಸಂಘಪರಿವಾರದ ಗೂಂಡಾಗಳಿಂದ ನಡೆಯುವ ದಾಳಿಯನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಜಿರೆ ಮತ್ತು ನಾವೂರು ಡಿವಿಝನ್ ವತಿಯಿಂದ ಮಿನಿ ವಿಧಾನಸಭಾ ಬಳಿ ಪ್ರತಿಭಟನೆ ಮಾಡಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾ ಕಾರ್ಯದರ್ಶಿ ತ್ವಾಹೀರ್ ಇಂಜಿನಿಯರ್ ದಿಕ್ಸೂಚಿ ಭಾಷಣವನ್ನು ಮಾಡಿದರು. ಈ ಸಮಯದಲ್ಲಿ ತ್ರಿಪುರ ಸರ್ಕಾರ ಮತ್ತು ಸಂಘಪರಿವಾರದ ವಿರುದ್ದ ಗಟ್ಟಿ ಧ್ವನಿಯಲ್ಲಿ ಘೋಷಣೆ ಕೂಗಲಾಯಿತು. ಪ್ರತಿಭಟನೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಜಿರೆ ಡಿವಿಝನ್ ಅಧ್ಯಕ್ಷರಾದ ಮಮ್ಮದ್‌‌ ಅಲಿ ನಾವೂರ ಡಿವಿಝನ್ ಅಧ್ಯಕ್ಷರಾದ ರಶೀದ್ ಬೆಳ್ತಂಗಡಿ, ಎಸ್ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಫಝಲ್ ರೆಹಮಾನ್ ಮತ್ತು ಅನೇಕ ಕಾರ್ಯಕರ್ತರು, ಊರಿನ ನಾಗರಿಕರು ಉಪಸ್ಥಿತರಿದ್ದರು.

error: Content is protected !!
Scroll to Top