(ನ್ಯೂಸ್ ಕಡಬ) newskadaba.com ಕಡಬ, ಅ.29. ಸದಸ್ಯರ ಗಮನಕ್ಕೆ ತಾರದೆ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದ್ದು, ಈ ಬಗ್ಗೆ ಅಧ್ಯಕ್ಷರು ಹಾಗೂ ಪಿಡಿಒ ಅವರನ್ನು ಪ್ರಶ್ನಿಸಿದಾಗ ಉಡಾಫೆಯಿಂದ ಉತ್ತರ ನೀಡಿದ್ದಾರೆ ಎಂದು ಆರೋಪಿಸಿ ಮರ್ಧಾಳ ಗ್ರಾಮ ಪಂಚಾಯತ್ ನ ಮೂವರು ಸದಸ್ಯರು ಪಂಚಾಯತ್ ಒಳಗಡೆ ಧರಣಿ ಕುಳಿತಿದ್ದಾರೆ.
102 ನೆಕ್ಕಿಲಾಡಿ ಗ್ರಾಮದ ಒಂದನೇ ವಾರ್ಡ್ ಸದಸ್ಯರಾದ ಶಾಕೀರ್, ಮೀನಾಕ್ಷಿ ಹಾಗೂ ಅಜಯ್ ಕುಮಾರ್ ಅವರು ಇಂದು ಅಪರಾಹ್ನದಿಂದ ಪಂಚಾಯತ್ ಒಳಗೆ ಪ್ರತಿಭಟನೆ ಕುಳಿತಿದ್ದು, ಪಂಚಾಯತ್ ಕಛೇರಿಗೆ ಬೀಗ ಹಾಕಲು ಬಿಡದೆ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಜುಲೈ 29 ರಂದು ನಡೆದ ಸಾಮಾನ್ಯ ಸಭೆಯಲ್ಲಿ ನಿಧಿ 2ರ ಕ್ರಿಯಾ ಯೋಜನೆ ಮತ್ತು ಎಸ್ಕ್ರೋ ವರ್ಗಾಯಿತ ಅನುದಾನದ ಕ್ರಿಯಾಯೋಜನೆಯನ್ನು ನಮ್ಮ ಗಮನಕ್ಕೆ ತಾರದೆ ಅಧ್ಯಕ್ಷರು ಹಾಗೂ ಪಿಡಿಒ ಅವರು ತಯಾರಿಸಿದ್ದು, ಈ ಬಗ್ಗೆ ಪ್ರಶ್ನಿಸಿದರೆ ನಮ್ಮಲ್ಲಿ ಕೇಳಿ ಕ್ರಿಯಾ ಯೋಜನೆ ಮಾಡುವ ಅಗತ್ಯ ಇಲ್ಲ ಅನ್ನುವ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಧರಣಿ ಕುಳಿತಿರುವವರು ಆರೋಪಿಸಿದ್ದಾರೆ.