ಎರಡನೇ ತರಗತಿ ಬಾಲಕನನ್ನುಮೊದಲ ಮಹಡಿಯಿಂದ ತಲೆಕೆಳಗಾಗಿ ನೇತುಹಾಕಿದ ಪ್ರಾಂಶುಪಾಲ..! ➤ ಜಿಲ್ಲಾಧಿಕಾರಿ ಗರಂ

(ನ್ಯೂಸ್ ಕಡಬ) Newskadaba.com ಮಿರ್ಜಾಪುರ, ಅ. 29. ಖಾಸಗಿ ಶಾಲೆಯೊಂದರ ಕಟ್ಟಡದ ಮೊದಲ ಮಹಡಿಯಿಂದ ಎರಡನೇ ತರಗತಿ ವಿದ್ಯಾರ್ಥಿ ಸೋನು ಯಾದವ್ ಎಂಬ ಬಾಲಕನನ್ನು ಪ್ರಾಂಶುಪಾಲರು ತಲೆಕೆಳಗಾಗಿ ನೇತಾಡಿಸಿದ ಆಘಾತಕಾರಿ ಘಟನೆ ಮಿರ್ಜಾಪುರದಲ್ಲಿ ನಡೆದಿದೆ.

ಬಾಲಕ ತಲೆ ಕೆಳಗಾಗಿ ನೇತಾಡುತ್ತಿರುವ ಹಾಗೂ ಹಲವಾರು ಮಕ್ಕಳು ಅದನ್ನು ನೋಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋ ವೈರಲ್ ಆಗುತ್ತಿದ್ದಂತೆಯೇ ಮಿರ್ಜಾಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಿಕ್ಷಣಾಧಿಕಾರಿಗಳಿಗೆ ಈ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೇ ಪ್ರಾಂಶುಪಾಲರ ವಿರುದ್ಧ ದೂರು ದಾಖಲಿಸುವಂತೆ ಸೂಚನೆ ನೀಡಿದ್ದಾರೆ. ಸೋನು ಯಾದವ್ ಊಟ ಮಾಡುವಾಗ ಚೇಷ್ಟೆ ಮಾಡಿದ್ದು, ಇದರಿಂದ ಕೋಪಗೊಂಡ ಪ್ರಾಂಶುಪಾಲ ಮನೋಜ್ ವಿಶ್ವಕರ್ಮ ಬಾಲಕಮ ಒಂದು ಕಾಲನ್ನು ಹಿಡಿದು ಮೊದಲನೇ ಮಹಡಿಯ ಮೇಲಿಂದ ತಲೆ ಕೆಳಗಾಗಿ ನೇತಾಡಿಸಿದ್ದಾರೆ. ಬಾಲಕ ಕಿರುಚುತ್ತಿದ್ದರೂ, ಪ್ರಿನ್ಸಿಪಾಲರ ಮನಸ್ಸು ಕರಗಲಿಲ್ಲ ಎನ್ನಲಾಗಿದೆ.

Also Read  ಪ್ರಿಯಕರನೊಂದಿಗೆ ಸೇರಿ ಹೆತ್ತ ತಾಯಿಯನ್ನೇ ಇರಿದು ಕೊಂದ ಪಾಪಿ ಮಗಳು...!! 

error: Content is protected !!
Scroll to Top