ಪ್ರಪಾತಕ್ಕೆ ಉರುಳಿಬಿದ್ದ ಈಚರ್ ಲಾರಿ ➤ ನಾಲ್ವರು ಮೃತ್ಯು, ಐವರು ಗಂಭೀರ

(ನ್ಯೂಸ್ ಕಡಬ) Newskadaba.com ಹೆಬ್ರಿ, ಅ. 29. ಈಚರ್ ಲಾರಿಯೊಂದು ಪಲ್ಟಿಯಾಗಿ ನಾಲ್ವರು ಮೃತಪಟ್ಟು, ಐವರು ಗಾಯಗೊಂಡ ಘಟನೆ ಆಗುಂಬೆ ಘಾಟಿಯಲ್ಲಿ ನಡೆದಿದೆ.

ಈಚರ್ ಲಾರಿಯು ಘಾಟಿಯನ್ನು ಇಳಿಯುವ ಸಂದರ್ಭ ನಿಯಂತ್ರಣ ತಪ್ಪಿದ ಲಾರಿಯು ಪ್ರಪಾತಕ್ಕೆ ಉರುಳಿ ಬಿದ್ದಿದ್ದು, ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ. ಐವರು ಗಾಯಾಳುಗಳನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಮೇಲೆತ್ತಲು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ. ಮೃತಪಟ್ಟವರನ್ನು ಕಾರ್ಕಳದ ಮಿಯ್ಯಾರಿನವರು ಎಂದೆನ್ನಲಾಗಿದೆ. ಹೆಬ್ರಿ ಮತ್ತು ಆಗುಂಬೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

Also Read  ಉಪಚುನಾವಣೆ- ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾಸೀರ್ ಖಾನ್ ಪಠಾಣ್ ನಾಮಪತ್ರ ಸಲ್ಲಿಕೆ

error: Content is protected !!
Scroll to Top