ಪವರ್ ಸ್ಟಾರ್ ನಿಧನದ ಬೆನ್ನಲ್ಲೇ ಫಿಲ್ಮ್ ಇಂಡಸ್ಟ್ರೀಗೆ ಮತ್ತೊಂದು ಆಘಾತ ➤ ಮತ್ತೋರ್ವ ಸೂಪರ್ ಸ್ಟಾರ್ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) Newskadaba.com ಚೆನೈ, ಅ. 29. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನದಿಂದ ಆಘಾತಗೊಂಡಿದ್ದ ಫಿಲ್ಮ್ ಇಂಡಸ್ಟ್ರಿಗೆ ಮತ್ತೊಂದು ಆಘಾತ ಎದುರಾಗಿದ್ದು, ತೀವ್ರ ಅನಾರೋಗ್ಯದಿಂದಾಗಿ ನಟ ರಜನಿಕಾಂತ್ ಅವರು ಇಂದು ಚೆನೈ ನ ಕಾವೇರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಆದರೆ ಆಸ್ಪತ್ರೆಯು ಇನ್ನೂ ವೈದ್ಯಕೀಯ ಬುಲೆಟಿನ್ ಅನ್ನು ಬಿಡುಗಡೆ ಮಾಡಿಲ್ಲ ಎನ್ನಲಾಗಿದೆ. ಆಸ್ಪತ್ರೆಯ ಸುತ್ತಲೂ ಬಿಗಿ ಬಂದೋಬಸ್ತು ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ನಿರೀಕ್ಷಿಸಲಾಗಿದೆ.

Also Read  ಮದುವೆಯಾಗುವಂತೆ ಒತ್ತಾಯಿಸಿದ ಮೇಕಪ್ ಆರ್ಟಿಸ್ಟ್ ಪ್ರಿಯಕರನಿಂದಲೇ ಕೊಲೆ

error: Content is protected !!
Scroll to Top