(ನ್ಯೂಸ್ ಕಡಬ) newskadaba.com ಮಂಗಳೂರು, ಅ. 29. ಮೀನುಗಾರಿಕೆಗೆಂದು ತೆರಳಿದ ಯುವಕನೋರ್ವ ಬೋಟ್ ನಿಂದ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿರುವ ಘಟನೆ ಮಂಗಳೂರಿನ ಮೀನುಗಾರಿಕಾ ದಕ್ಕೆಯಲ್ಲಿ ನಡೆದಿದೆ.
ನಾಪತ್ತೆಯಾದವರನ್ನು ತಮಿಳುನಾಡು ಮೂಲದ ವೆಲ್ ಮುರುಗನ್(24) ಎಂದು ಗುರುತಿಸಲಾಗಿದೆ. ಈತ ಇಲ್ಲಿನ ಮೀನುಗಾರಿಕಾ ದಕ್ಕೆಯಿಂದ ಮೀನುಗಾರಿಕೆಗೆಂದು ತೆರಳಿದ್ದ ಬೋಟ್‌ನಿಂದ ಸಮುದ್ರಕ್ಕೆ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ರಾತ್ರಿ 10:30ಕ್ಕೆ ಹೊರಟಿದ್ದ ಈ ಬೋಟ್ ನಲ್ಲಿ ಒಟ್ಟು 10 ಮಂದಿ ಇದ್ದು, ರಾತ್ರಿ 11:15 ರ ವೇಳೆಗೆ ಅದರಲ್ಲಿದ್ದ ವೆಲ್ ಮುರುಗನ್ ನಾಪತ್ತೆಯಾಗಿದ್ದರು. ಜತೆಗಿದ್ದವರು ಟಾರ್ಚ್ ಹಾಕಿ ಸಮುದ್ರದ ಸುತ್ತಮುತ್ತ ಹುಡುಕಾಡಿದರೂ ಮುರುಗನ್ ಪತ್ತೆಯಾಗಿರಲಿಲ್ಲ. ಬೋಟು ಸಮುದ್ರದಲ್ಲಿ ಮುಂದಕ್ಕೆ ಸಾಗುತ್ತಿದ್ದಂತೆ ಅಲೆಗಳ ಅಬ್ಬರಕ್ಕೆ ವೆಲ್ ಮುರುಗನ್ ಅವರು ಬೋಟ್‌ನಿಂದ ಸಮುದ್ರದ ನೀರಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
Also Read ಪಂಜ ಅರಣ್ಯಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ➤ ಅಕ್ರಮವಾಗಿ ಸಾಗಿಸುತ್ತಿದ್ದ ಮರದ ದಿಮ್ಮಿ ಸಹಿತ ಪಿಕಪ್ ವಶಕ್ಕೆ