ಕಡಬ: ಕೌಟುಂಬಿಕ ಕಲಹ ಹಿನ್ನೆಲೆ ➤ ಪತ್ನಿ, ಮಗಳನ್ನು ದಾರಿ ಮಧ್ಯೆ ಬಿಟ್ಟುಹೋದ ಪತಿ

(ನ್ಯೂಸ್ ಕಡಬ) Newskadaba.com ಕಡಬ, ಅ. 29. ಕಾರಿನಲ್ಲಿ ತೆರಳುತ್ತಿದ್ದ ವೇಳೆ ವ್ಯಕ್ತಿಯೋರ್ವರು ತನ್ನ ಹೆಂಡತಿ ಹಾಗೂ ಮಗಳನ್ನು ದಾರಿ ಮಧ್ಯೆಯೇ ಬಿಟ್ಟು ಹೋದ ಘಟನೆ ನಡೆದಿದೆ.


ತಾಲೂಕಿನ ಸಿರಿಬಾಗಿಲು ನಿವಾಸಿ 9 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಇದರ ಪೈಕಿ ಓರ್ವ ಮಗ ಬುದ್ಧಿ ಮಾಂದ್ಯನಾಗಿದ್ದು, ಮದುವೆಯಾದ ಬಳಿಕ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು, ಇದರ ಕುರಿತು ಈ ಮೊದಲು ಪತ್ನಿ ಪುತ್ತೂರು ಮಹಿಳಾ ಠಾಣೆ ಮತ್ತು ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರು ನೀಡಿದ್ದರು. ಅ. 27 ರಂದು ಪತಿ-ಪತ್ನಿ ಮತ್ತು ಮಕ್ಕಳಿಬ್ಬರು ಕಾರಿನಲ್ಲಿ ಹೋಗುತ್ತಿದ್ದ ವೇಳೆ ಪತಿಯು, ಪತ್ನಿಯೊಂದಿಗೆ ದಿನಸಿ ವಿಷಯವಾಗಿ ಜಗಳ ತೆಗೆದು ಅವಾಚ್ಯವಾಗಿ ಬೈದು ಮಗಳನ್ನು ಮತ್ತು ಹೆಂಡತಿಯನ್ನು ದಾರಿ ಮಧ್ಯೆಯೇ ಬಿಟ್ಟು, ಮಗನನ್ನು ಜೊತೆ ಕರೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಸುಬ್ರಹ್ಮಣ್ಯ: ಸರಳ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐದು ನವಜೋಡಿಗಳು

error: Content is protected !!
Scroll to Top