ಮರ್ಧಾಳ: ಇಂದು ‘ಕೊಹಿನೂರ್ ಮೆಡಿಕಲ್ಸ್ ಶುಭಾರಂಭ ➤ ಶುಭಾರಂಭದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ

(ನ್ಯೂಸ್ ಕಡಬ) newskadaba.com ಕಡಬ, ಅ.29. ಇಲ್ಲಿಗೆ ಸಮೀಪದ ಮರ್ಧಾಳ ಬದ್ರಿಯಾ ಜುಮಾ ಮಸೀದಿಯ ವಾಣಿಜ್ಯ ಸಂಕೀರ್ಣದಲ್ಲಿ ಕೊಹಿನೂರ್ ಮೆಡಿಕಲ್ಸ್ ಶುಭಾರಂಭ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವು ಇಂದು ನಡೆಯಲಿದೆ.

ಅಸ್ಸಯ್ಯದ್ ಶಾಹುಲ್ ಹಮೀದ್ ತಂಙಳ್ ಮರ್ಧಾಳ, ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಮರ್ಧಾಳ ಸೈಂಟ್ ಮೇರೀಸ್ ಚರ್ಚಿನ ಧರ್ಮಗುರು ಫಾದರ್ ಮ್ಯಾಥ್ಯೂ ಜಾನ್ ಗೌರವ ಉಪಸ್ಥಿತಿಯಲ್ಲಿ ಇಂದು (ಅಕ್ಟೋಬರ್ 29) 10.30 ಗಂಟೆಗೆ ನೂತನ ಮೆಡಿಕಲ್ ಶುಭಾರಂಭಗೊಳ್ಳಲಿದೆ. ಮುಖ್ಯ ಅತಿಥಿಗಳಾಗಿ ಐತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶ್ಯಾಮಲ, ಮರ್ಧಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ್ ಕೋಡಂದೂರು, ಡಾ| ಕೃಷ್ಣರಾಜ್ ಎಸ್., ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾದ ಹಾಜಿ ಅಬೂಬಕ್ಕರ್ ಪಟ್ಟೆ, ಮರ್ಧಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶಿವಪ್ರಸಾದ್ ಕೈಕುರೆ, ಐತ್ತೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಎಂ.ಪಿ.ಯೂಸುಫ್, ಮರ್ಧಾಳ ಸೈಂಟ್ ಮೇರೀಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಈಶೋ ಫಿಲಿಪ್, ಸುಂಕದಕಟ್ಟೆ ಮಸೀದಿಯ ಅಧ್ಯಕ್ಷರಾದ ಹಾಜಿ ಅಬ್ದುಲ್‌ ಖಾದರ್ ಸೀಗಲ್, ಕೊಹಿನೂರ್ ವಿಂಗ್ ನ ಮುಖ್ಯ ಸಲಹೆಗಾರರಾದ ಅಶ್ರಫ್ ಕೆಜಿಎನ್ ಅಳಕೆಮಜಲ್, ಸೇಫ್ಟಿ ಆಫೀಸರ್ ಕರ್ತಾರ್ ನ ಸ್ವಾದಿಕ್ ಕೋಡಿಂಬಾಳ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Also Read  ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಒಡೆಯರ್‌ ► ಪುತ್ತೂರಿನ ಹನುಮಗಿರಿ ಶ್ರೀ ಆಂಜನೇಯ ಕ್ಷೇತ್ರಕ್ಕೆ ಭೇಟಿ

error: Content is protected !!
Scroll to Top